ಮೈಸೂರು

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹೋರಾಟ

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (ಎ.ಐ.ಟಿ.ಯು.ಸಿ) ಕಾರ್ಯಕರ್ತೆಯರ ಬೇಡಿಕೆಗಳನ್ನು ಒತ್ತಾಯಿಸಿ 2 ತಿಂಗಳುಗಳ ಕಾಲ ಹೋರಾಟ ನಡೆಸಲಾಗುತ್ತದೆ ಎಂದು ರಾಜ್ಯಾಧ್ಯಕ್ಷ ಹೆಚ್.ಕೆ.ರಾಮಚಂದ್ರಪ್ಪ ತಿಳಿಸಿದರು.

ಮೈಸೂರಿನ ಪತ್ರಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮಚಂದ್ರಪ್ಪ ನ.23 ರಿಂದ ಜ.23 ರವರೆಗೆ ನಡೆಯುವ ಹೋರಾಟ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ 2017 ಮತ್ತು 2018 ಬಡ್ಜೆಟ್ ನಲ್ಲಿ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಒತ್ತಾಯಿಸಿ ಚಳುವಳಿ ಮಾಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ನ.23 ರಂದು ಬೆಳಗಾವಿಯಲ್ಲಿ ನಡೆಯುವ ವಿಧಾನಸಭಾ ಅಧಿವೇಶನದಂದು ರಾಜ್ಯಾದ್ಯಂತ ಬೆಳಗಾವಿ ಚಲೋ ಚಳುವಳಿಯನ್ನು ನಡೆಸಲಾಗುವುದು, ಡಿಸೆಂಬರ್ 10,11,12 ಮೂರು ದಿನಗಳು ಬಿಹಾರದಲ್ಲಿ ಅಖಿಲ ಭಾರತ ಮಟ್ಟದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಎ.ಐ.ಟಿ.ಯು.ಸಿ ಫೆಡರೇಷನ್ ರಾಷ್ಟ್ರೀಯ ಸಮ್ಮೇಳನವನ್ನು ನಡೆಸಲಾಗುವುದು, ಜನವರಿಯಲ್ಲಿ ರಾಜ್ಯಾದ್ಯಂತ  ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಬೇಡಿಕೆಗಳನ್ನು ಒತ್ತಾಯಿಸಿ ಮೆರವಣಿಗೆ, ಧರಣಿ ನಡೆಸಲಾಗುತ್ತದೆ ಎಂದು ತಿಳಿಸಿದರು.

ನಮ್ಮ ಬೇಡಿಕೆಗಳು ಇಂತಿವೆ:

ಸರ್ಕಾರಿ ನೌಕರರೆಂದು ಸಿ/ಡಿ ಗ್ರೂಪ್ ಮಾಡಬೇಕು, ಪಿಂಚಣಿ 3000 ರೂ. ನೀಡಬೇಕು, ಕನಿಷ್ಠ ಕಾರ್ಯಕರ್ತರಿಗೆ ತಿಂಗಳಿಗೆ ವೇತನ 18,000 ರೂ. ಸಹಾಯಕಿಯರಿಗೆ 18,000 ರೂ. ನೀಡಬೇಕು, ಸೇವಾಹಿರಿತನದ ಆಧಾರದ ಮೇಲೆ ಸಂಬಳ ಹೆಚ್ಚಿಸಬೇಕು. ಐ.ಸಿ.ಡಿ.ಎಸ್ ಬದಲು ಅಭಿಯಾನದ ಹೆಸರಿನಲ್ಲಿ ಖಾಸಗೀಕರಣದ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಸರಳ ಪ್ರೇಮಕುಮಾರಿ, ನಾಗಮ್ಮ, ಕೆ.ವಿಜಯಲಕ್ಷ್ಮಿ, ಮಹದೇವಮ್ಮ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: