ಮೈಸೂರು

ಜೂಜು ಅಡ್ಡೆ ಮೇಲೆ ದಾಳಿ: ಆರು ಮಂದಿಯ ಬಂಧನ

ಲಷ್ಕರ್ ಮೊಹಲ್ಲಾದ ಹಳ್ಳದಕೇರಿ 3ನೇ ಕ್ರಾಸ್‍ನಲ್ಲಿರುವ ಚಿನ್ನಾರಿ ನಿಲಯದ 1ನೇ ಮಹಡಿಯಲ್ಲಿರುವ ರೂಂ ನಂ:5ರ ಮೇಲೆ ದಾಳಿ ನಡೆಸಿದ ಮೈಸೂರು ನಗರ ಸಿಸಿಬಿ ಮತ್ತು ಲಷ್ಕರ್ ಠಾಣೆ ಪೊಲೀಸರು ಜೂಜಾಡುತ್ತಿದ್ದ 6 ಜನರನ್ನು ಬಂಧಿಸಿ, ಪಣವಾಗಿಟ್ಟಿದ್ದ 9,530 ರು. ವಶಪಡಿಸಿಕೊಂಡಿದ್ದಾರೆ.

ನಜರಬಾದ್ ಕಾಮಟಗೇರಿಯ ಹರೀಶ್(24), ಚಾಮರಾಜನಗರ ತಾಲೂಕಿನ ಸಂತೆಮರಳ್ಳಿಯ ರಾಜು(33), ಗಾಯತ್ರಿಪುರಂನ ಪಾಪಣ್ಣ(35), ನಜರ್‍ಬಾದ್‍ನ ಶ್ರೀನಿವಾಸ(35), ತಿಲಕ್‍ನಗರದ ಸ್ವಾಮಿ(45), ದೇವರಾಜ ಮೊಹಲ್ಲಾದ ಕುಮಾರ್(35) ಬಂಧಿತರು. ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿಬಿ ಘಟಕದ ಎಸಿಪಿ ಸಿ.ಗೋಪಾಲ್‍ ಅವರು ದಾಳಿ ನೇತೃತ್ವ ವಹಿಸಿದ್ದು, ಸಿಸಿಬಿ ಇನ್ಸ್‍ಪೆಕ್ಟರ್‍ ಪ್ರಸನ್ನ ಕುಮಾರ್, ಎಎಸ್ಐ ಎಂ.ಡಿ. ಶಿವರಾಜು, ಶಾಂತರಾಜು ಮತ್ತು ಸಿಬ್ಬಂದಿಯಾದ ಹಿರಣ್ಣಯ್ಯ, ಮಹದೇವಪ್ಪ, ಚಿಕ್ಕಣ್ಣ, ಯಾಕೂಬ್ ಷರೀಫ್, ಆನಂದ್, ಸಂತೋಷ್ ಇದ್ದರು.

Leave a Reply

comments

Related Articles

error: