ಸುದ್ದಿ ಸಂಕ್ಷಿಪ್ತ

ಅ. 6ರಿಂದ 8 : ರಾಜ್ಯಮಟ್ಟದ ನಾಟಕೋತ್ಸವ

ಮೈಸೂರು,ಅ.6:- ಕಳೆದ ಹನ್ನೊಂದು ವರ್ಷಗಳಿಂದ ಮೈಸೂರು ರಂಗಭೂಮಿಯಲ್ಲಿ ನಿರಂತರ ರಂಗ ಚಟುವಟಿಕೆಯಿಂದ ರಂಗಾಸಕ್ತರ ಗಮನ ಸೆಳೆದಿರುವ ನಮ್ಮರಂಗವಲ್ಲಿ ತಂಡ ಕಲಾಮಂದಿರದಲ್ಲಿ ಅಕ್ಟೋಬರ್ 6ರಿಂದ 8ರವರೆಗೆ ಮೂರು ದಿನಗಳ ರಾಜ್ಯಮಟ್ಟದ ನಾಟಕೋತ್ಸವವನ್ನು ಹಮ್ಮಿಕೊಂಡಿದೆ.ತಮ್ಮ ವಿಶಿಷ್ಟ ಪ್ರಯೋಗಗಳಿಂದ ರಾಜ್ಯಮಟ್ಟದಲ್ಲಿಜನರ ಮನಸೂರೆಗೊಂಡ ಉತ್ಕೃಷ್ಟ ದರ್ಜೆಯ ನಾಟಕಗಳನ್ನು ಮೈಸೂರಿನ ನಾಟಕ ಪ್ರಿಯರಿಗೆಉಣಬಡಿಸುವುದು ಈ ನಾಟಕೋತ್ಸವದ ಉದ್ದೇಶವಾಗಿದ್ದು, ನಾಟಕಗಳ ಜೊತೆಗೆ ಚಿತ್ರಕಲೆ ರಾಕ್ ಫ್ಯೂಷನ್, ಕರ್ನಾಟಕ ಸಂಗೀತದ ಜುಗಲ್‍ಬಂದಿ ಕಾರ್ಯಕ್ರಮಗಳೂ ಅನಾವರಣಗೊಳ್ಳಲಿವೆ. ಅಕ್ಟೋಬರ್6, ಶುಕ್ರವಾರ ಸಂಜೆ 4 ಗಂಟೆಗೆ ಹಿರಿಯರಂಗಕರ್ಮಿ ಡಾ. ವಿಜಯಮ್ಮಅವರು ನಾಟಕೋತ್ಸವವನ್ನುಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಸಾಹಿತಿ ಹಾಗೂ ಅಂಕಣಕಾರ ಬಿ.ಚಂದ್ರೇಗೌಡ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ರಂಗವಲ್ಲಿತಂಡದ ಸಂಸ್ಥಾಪಕ ಸದಸ್ಯ ರವಿಪ್ರಸಾದ್ ಪಾಲ್ಗೊಳ್ಳಲಿದ್ದಾರೆ. (ಎಸ್.ಎಚ್)

Leave a Reply

comments

Related Articles

error: