ಮೈಸೂರು

ಸಿಎಸ್ಐ ಸಮಿತಿಯ ಸ್ಥಾನಗಳಿಗೆ ಚುನಾವಣೆ

ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ – ಮೈಸೂರು ಚಾಪ್ಟರ್ ಸಂಸ್ಥೆಯು ಈ ಬಾರಿ ಉಪಾಧ್ಯಕ್ಷ, ಮ್ಯಾನೇಜ್ ಮೆಂಟ್ ಸಮಿತಿಯ ಸದಸ್ಯ ಮತ್ತು ನಾಮಿನೇಷನ್ ಸಮಿತಿ ಸದಸ್ಯ ಸ್ಥಾನಕ್ಕೆ  ಚುನಾವಣೆ ನಡೆಸಲಿದೆ ಎಂದು ಸಂಘದ ಅಧ್ಯಕ್ಷ ರಾಂಪುರ್ ಶ್ರೀನಾಥ್ ಹೇಳಿದರು.

ಮೈಸೂರಿನ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಾಥ್ 4 ಸದಸ್ಯರನ್ನು ನಾಮಿನೇಟ್ ಮಾಡಲಾಗುತ್ತದೆ. ನಾಮಿನೇಷನ್ ಸಮಿತಿಯ ಅಧ್ಯಕ್ಷರಾದ ಬಿ.ಎಸ್. ವಿಶ್ವನಾಥ ರಾವ್ ಅವರ ಮೇಲ್ವಿಚಾರಣೆಯಲ್ಲಿ ನ. 12 ಕ್ಕೆ ಚುನಾವಣೆ ನಡೆಸಲಾಗುತ್ತದೆ. ವಿದ್ಯಾರಣ್ಯಪುರಂನ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಅಂಡ್ ಇನ್ಫರ್ಮೇಶನ್ ಟೆಕ್ನಾಲಜಿ ಯಲ್ಲಿ ಮಧ್ಯಾಹ್ನ2 ರಿಂದ ಸಂಜೆ 5 ರವರೆಗೆ ಚುನಾವಣೆ ನಡೆಯುತ್ತದೆ.  ಸಿಎಸ್ಐ ನ ಎಲ್ಲಾ  ಸದಸ್ಯರು [email protected] ಮೇಲ್ ಗೆ ತಮ್ಮ ವಿವರಗಳನ್ನು ಕಳುಹಿಸಿಕೊಡಬೇಕೆಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಅರುಣಾ ದೇವಿ 9342342057 ಗೆ ಸಂಪರ್ಕಿಸಿ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷೆ ಅನಿತಾ ವೆಂಕಟೇಶ್, ಕಾರ್ಯದರ್ಶಿ ಅರುಣಾ ದೇವಿ, ನಾಮಿನೇಷನ್ ಕಮಿಟಿಯ ಅಧ್ಯಕ್ಷ ಬಿ.ಎಸ್. ವಿಶ್ವನಾಥ್ ರಾವ್, ಜೆ.ಜಿ. ವೆಂಕಟೇಶ್, ಜಿ.ಬಿ.ರವಿಕುಮಾರ್, ಎಂ.ಎಸ್.ವೀರೇಂದ್ರ ಕುಮಾರ್ ಹಾಜರಿದ್ದರು.

Leave a Reply

comments

Related Articles

error: