ಪ್ರಮುಖ ಸುದ್ದಿ

ರಾಮಾಯಣ ವಿನಯವಂತಿಕೆ, ಸಂಸ್ಕಾರ ಪ್ರತಿಪಾದಿಸುತ್ತದೆ: ಮಲ್ಲೇಶ್ ನಾಯಕ್

ಪ್ರಮುಖ ಸುದ್ದಿ, ತಿ.ನರಸೀಪುರ, ಅ.6: ಮಹರ್ಷಿ ವಾಲ್ಮೀಕಿ ಅವರಿಂದ ರಚಿತವಾದ ರಾಮಾಯಣ ವಿನಯವಂತಿಕೆ ಸಂಸ್ಕಾರ  ಹಾಗೂ ಜೀವನದ ಮೌಲ್ಯಗಳನ್ನು ಪ್ರತಿಪಾದಿಸುವುದರ ಜೊತೆಗೆ ಮಹಿಳೆಯರ ಬಗ್ಗೆ ಪೂಜ್ಯ ಭಾವನೆ ಮೂಡಿಸುತ್ತಿದೆ ಎಂದು ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಲ್ಲೇಶ್ ನಾಯಕ್ ಅಭಿಪ್ರಾಯಪಟ್ಟರು.

ಪಟ್ಟಣದ ಪುರಸಭಾ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಲ್ಮೀಕಿಯವರ ರಾಮಾಯಣದಲ್ಲಿ ಅಡಕವಾಗಿರುವ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಮನುಷ್ಯನ ಮನ ಪರಿವರ್ತನೆಗೆ ಅವರ ಸಂದೇಶಗಳು ಸೂಕ್ತವಾಗಿವೆ ಎಂದರು.

ಮಹರ್ಷಿ ವಾಲ್ಮೀಕಿಯವರು ಸಮಾಜವನ್ನು ಉನ್ನತಮಟ್ಟದಲ್ಲಿ ಕಟ್ಟಬೇಕೆಂಬ ಉದ್ದೇಶದಿಂದ ರಾಮಾಯಣ ಎಂಬ ಮಹಾಕಾವ್ಯ ರಚಿಸಿದ್ದಾರೆ. ಇದರಲ್ಲಿ ಮೌಲ್ಯಯುತವಾದ ಅಂಶಗಳು ನೀತಿಗಳು ಹಾಗೂ ರಾಜಕೀಯ ಚಿಂತನೆಗಳು ಅಡಕವಾಗಿವೆ. ಸಮಾಜದ ಪ್ರತಿಯೊಬ್ಬರೂ ರಾಮಾಯಣ ಮಹಾಕಾವ್ಯವನ್ನು ಓದಬೇಕು. ಹಾಗೂ ಅದರಲ್ಲಿರುವ ವಿಚಾರಗಳನ್ನು ಅರ್ಥೈಸಿಕೊಳ್ಳಬೇಕು. ಆಗ ಮಾತ್ರ ವಾಲ್ಮೀಕಿಯವರು ತಿಳಿಸಿದ ರಾಮರಾಜ್ಯ ಕಾಣಬಹುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷೆ ಸುಧಾ, ಉಪಾಧ್ಯಕ್ಷೆ ರತ್ನಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವಸ್ವಾಮಿ, ಸದಸ್ಯರಾದ ಶಶಿಕಲಾ, ಮೀನಾಕ್ಷಿ, ರಾಘವೇಂದ್ರ, ಕನಕಪಾಪು, ನಾಮನಿರ್ದೇಶಿತ ಸದಸ್ಯ ಮಹದೇವಸ್ವಾಮಿ, ನಾಗೇಂದ್ರ, ಸಿ.ಮಹದೇವ, ಗುಲ್ಜಾರ್ ಖಾನ್, ಮುಖ್ಯಾಧಿಕಾರಿ ನಾಗರತ್ನ ಕಿರಿಯ ಇಂಜಿನಿಯರ್ ಪುರುಷೋತ್ತಮ್, ಆರೋಗ್ಯಾಧಿಕಾರಿ ಚೇತನ್ ಕುಮಾರ್, ಕಂದಾಯ ಅಧಿಕಾರಿ ರಾಣಿ, ಪುಟ್ಟಸ್ವಾಮಿ, ಮಹದೇವನಾಯಕ, ಕೆಂಪರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: