
ಮೈಸೂರು
ಅಪೊಲೊ ಆಸ್ಪತ್ರೆಯಿಂದ ಅಗ್ನಿಶಾಮಕದಳದ ಸಿಬ್ಬಂದಿಗಳಿಗೆ ಜಾಕೆಟ್ ವಿತರಣೆ
ಮೈಸೂರು,ಅ.6-ನಗರದ ಬಿಜಿಎಸ್ ಅಪೊಲೊ ಆಸ್ಪತ್ರೆಯವರು ತಮ್ಮ ಸಿಎಸ್ ಆರ್ ನಡಿ ಮೈಸೂರು ಜಿಲ್ಲೆಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಜಾಕೆಟ್ ಗಳನ್ನು ವಿತರಿಸಿದರು.
ನಗರದ ಸರಸ್ವತಿಪುರಂನಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿನ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಪೊಲೊ ಆಸ್ಪತ್ರೆಯ ಆಡಳಿತ ಮಂಡಳಿಯವರು ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಮಳೆಗಾಲ, ಚಳಿಗಾಲ ಹಾಗೂ ರಾತ್ರಿ ವೇಳೆಯಲ್ಲಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಜಾಕೆಟ್ ಗಳನ್ನು ವಿತರಿಸಿದರು.(ವರದಿ-ಎಚ್.ಎನ್, ಎಂ.ಎನ್)