ಮೈಸೂರು

ಅಕ್ರಮ ಗ್ಯಾಸ್ ರೀಫಿಲ್ಲಿಂಗ್‍ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಕೆ.ಎನ್. ಪುರ ಹರಿಶ್ಚಂದ್ರ ಘಾಟ್ ರಸ್ತೆಯ ಟಿಪ್ಪು ಸರ್ಕಲ್ ಬಳಿಯಿರುವ ಇನ್ನಾ ಪೇಂಟ್ಸ್ ಮತ್ತು ಹಾರ್ಡ್‍ವೇರ್‍ ಎಂಬ ಮಳಿಗೆಯ ಮೇಲೆ ದಾಳಿ ನಡೆಸಿದ ಸಿಸಿಬಿ ಮತ್ತು ಉದಯಗಿರಿ ಪೊಲೀಸರು ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್‍ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕಲ್ಯಾಣಗಿರಿಯ ರಫೀಕ್‍ ಖಾನ್ (42) ಬಂಧಿತ ವ್ಯಕ್ತಿ.

ಗ್ಯಾಸ್ ರೀಫಿಲ್ಲಿಂಗ್‍ ಮಾಡಲು ಬಳಸುತ್ತಿದ್ದ 1 ಇಂಡೇನ್ ಕಂಪೆನಿಯ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್, 1 ಭಾರತ್ ಕಂಪೆನಿಯ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್, 1 ಎಲೆಕ್ಟ್ರಾನಿಕ್ ವೇಯಿಂಗ್ ಮಿಷನ್, 1 ಎಲೆಕ್ಟ್ರಾನಿಕ್ ಮೋಟಾರು ಹಾಗೂ ನಗದು 16 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸಿಸಿಬಿ ಘಟಕದ ಎಸಿಪಿ ಸಿ. ಗೋಪಾಲ್ ನೇತೃತ್ವದಲ್ಲಿ ಸಿಸಿಬಿ ಘಟಕದ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಸನ್ನಕುಮಾರ್, ಪಿಎಸ್‍ಐ ಎಂಜೆ. ಜಯಶೀಲನ್, ಎಎಸ್‍ಐ ಎಂ.ಡಿ. ಶಿವರಾಜು, ಶಾಂತರಾಜು, ಸಿಬ್ಬಂದಿಯಾದ ಹಿರಣ್ಣಯ್ಯ, ಅಸ್ಗರ್‍ ಖಾನ್, ಡಿ. ಶ್ರೀನಿವಾಸ್ ಪ್ರಸಾದ್, ಮಹದೇವಪ್ಪ, ಯಾಕೂಬ್ ಷರೀಫ್, ಶೈಲೇಶ್ ಹಾಗೂ ಆಹಾರ ನಿರೀಕ್ಷಕರಾದ ಶ್ರೀ ಲಕ್ಷ್ಮೀ, ಶ್ರೀರಾಮ್‍ ಭಾಗವಹಿಸಿದ್ದರು.

Leave a Reply

comments

Related Articles

error: