ಮೈಸೂರು

ಸಾರ್ಥಕ ಸಾಧನಾ ಸಿರಿಪಥ ಸ್ಮರಣ ಸಂಚಿಕೆಗೆ ಲೇಖನ ಆಹ್ವಾನ

ಮೈಸೂರು, ಅ.6 : ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ 110ನೇ ಕಾರ್ಯಕ್ರಮದಂಗವಾಗಿ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಯವರ ಗುರುವಂದನೆ, ಸ್ವಾತಂತ್ರ ಸೇನಾನಿ ತಗಡೂರು ಸುಬ್ಬಣ್ಣ ಹಾಗೂ ಕನ್ನಡದ ಕಟ್ಟಾಳು ಮ.ರಾಮಮೂರ್ತಿಯವರ ಸಂಸ್ಮರಣಾರ್ಥ ಡಾ.ಶಿವರಾಜಪ್ಪ ಸಾಂಪದಕತ್ವದಲ್ಲಿ ‘ಸಾರ್ಥಕ ಸಾಧನಾ ಸಿರಿಪಥ’ ಸ್ಮರಣ ಸಂಚಿಕೆಯನ್ನು ಪ್ರಕಟಿಸಲಿದ್ದು ಮಹನೀಯರಿಗೆ ಸಂಬಂಧಿಸಿದ ಲೇಖನಗಳನ್ನು ಆಹ್ವಾನ ನೀಡಲಾಯಿತು.

ಶುಕ್ರವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಡಾ.ಶಿವರಾಜಪ್ಪ ಮಾತನಾಡಿ ಡಿಸೆಂಬರ್ 6 ಮತ್ತು 7ರಂದು ನಗರದ ಜಗನ್ಮೋಹನ ಅರಮನೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಬಿಡುಗಡೆಯಾಗುವ ಸ್ಮರಣ ಸಂಚಿಕೆಗೆ ಆಸಕ್ತ ಬರಹಗಾರರು ವಿಷಯಕ್ಕೆ ಸಂಬಂಧಿಸಿದಂತೆ ಲೇಖನಗಳನ್ನು ಕಳುಹಿಸಬಹುದು ಎಂದು ಕೋರಿದ ಅವರು ಇದೇ ಸಂದರ್ಭದಲ್ಲಿ ಮಹನೀಯರ ಸೇವೆ ಬಗ್ಗೆ ವಿಚಾರ ಸಂಕಿರಣ, ವಿವಿಧ ಕ್ಷೇತ್ರಗಳ ಗಣ್ಯರ ಸನ್ಮಾನವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.  ಮಾಹಿತಿಗಾಗಿ ಮೊ.ನಂ. 9901514458, 8867416122 ಅನ್ನು ಸಂಪರ್ಕಿಸಬಹುದು.

ವೇದಿಕೆ ಅಧ್ಯಕ್ಷ ತಗಡೂರು ಗೌರಿ ಶಂಕರ್ ಮಾತನಾಡಿ, ಸಂಸದ ಆರ್.ಧ್ರುವನಾರಾಯಣ್, ಕಾಂಗ್ರೆಸ್ ಮುಖಂಡ ಡಾ.ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕ ಕಳಲೆ ಕೇಶವಮೂರ್ತಿ, ಮೈಸೂರು ವಿವಿ ವಿಶ್ರಾಂತ ಕುಲಪತಿ ಕೆ.ಎಸ್.ರಂಗಪ್ಪ ಇದ್ದಾರೆ. ಮುಖಂಡರಾದ ಎಸ್.ಎಂ.ಜವರೇಗೌಡ, ಎಂ.ಜಿ.ಸುದೀಪ್, ಜಿ.ಪಂ.ಅಧ್ಯಕ್ಷ ನಯಿಮಾ ಸುಲ್ತಾನ, ಕೆ.ಎಸ್.ರಘುರಾಮಯ್ಯ ವಾಜಪೇಯಿ, ಗೀತಾ ಗಣೇಶ್ ಮೊದಲಾದವರನ್ನೊಳಗೊಂಡ ಸಮಿತಿಯು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪತ್ರಕರ್ತ ಕಿರಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಎಸ್.ಎಂ.ಜವರೇಗೌಡ, ಮಲ್ಲಪ್ಪಗೌಡ, ಸಂಜೀವ ಶೆಟ್ಟಿ, ಎಸ್.ವೆಂಕಟೇಶ್, ಡಿ.ಸಿ.ದರ್ಶಿನಿ ರಂಗನಾಥ್ ಮೊದಲಾದವರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: