ಕ್ರೀಡೆ

ಏಕದಿನ ಕ್ರಿಕೆಟ್ ಗೆ ಜಾನ್ ಹೇಸ್ಟಿಂಗ್ಸ್ ವಿದಾಯ

ಪ್ರಮುಖ ಸುದ್ದಿ, ಮೆಲ್ಬೋರ್ನ್, ಅ.6: ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗುತ್ತಿದ್ದ ಆಸ್ಟ್ರೇಲಿಯಾ ತಂಡದ ವೇಗಿ ಜಾನ್ ಹೇಸ್ಟಿಂಗ್ಸ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ.

ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿಯಾಗಿದ್ದ ಹೇಸ್ಟಿಂಗ್ಸ್ ತಮ್ಮ ಮೊನಚು ಬೌಲಿಂಗ್ ನಿಂದ ಎದುರಾಳಿಯ ನಿದ್ದೆಗೆಡಿಸುತ್ತಿದ್ದರು. 2010ರಲ್ಲಿ ಏಕದಿನ ಕ್ರಿಕೆಟ್ ಬದುಕಿಗೆ ಪಾದಾರ್ಪಣೆ ಮಾಡಿದ್ದ ಜಾನ್ ಹೇಸ್ಟಿಂಗ್ಸ್ ಒಂದಿಲ್ಲೊಂದು ಗಾಯದ ಸಮಸ್ಯೆಗೆ ತುತ್ತಾಗುತ್ತಿದ್ದರು. ಈ ಹಿನ್ನಲೆಯಲ್ಲಿ ಏಕದಿನ ಮತ್ತು ಫಸ್ಟ್ ಕ್ಲಾಸ್ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದು ಟಿ20 ಕ್ರಿಕೆಟ್ನಲ್ಲಿ ಆಡಲಿದ್ದಾರೆ. ಜಾನ್ ಹೇಸ್ಟಿಂಗ್ಸ್ 2012ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ ಒಂದು ಟೆಸ್ಟ್ ಪಂದ್ಯ ಆಡಿದ್ದು 1 ವಿಕೆಟ್ ಮಾತ್ರ ಪಡೆದಿದ್ದರು. ಇನ್ನು 29 ಏಕದಿನ ಪಂದ್ಯಗಳನ್ನು ಆಡಿರುವ ಅವರು 42 ವಿಕೆಟ್ ಪಡೆದಿದ್ದಾರೆ. ಆದರೆ ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗಿ ತಂಡದಿಂದ ಹೊರಗುಳಿಯುತ್ತಿದ್ದರು. ಇದರಿಂದ ಬೇಸತ್ತು ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ನಿವೃತ್ತಿ ಘೋಷಿಸಿದ್ದಾರೆ. (ವರದಿ ಬಿ.ಎಂ)

 

Leave a Reply

comments

Related Articles

error: