ಕರ್ನಾಟಕಪ್ರಮುಖ ಸುದ್ದಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ : ಜಗದೀಶ್ ಶೆಟ್ಟರ್ ವಾಗ್ದಾಳಿ

ರಾಜ್ಯ(ಹುಬ್ಬಳ್ಳಿ)ಅ.6:- ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ವಿರೋಧಿಗಳನ್ನು ಹಣಿಯಲು ಎಸಿಬಿ ರಚಿಸಿದ್ದಾರೆ ಎಂದು ವಿಪಕ್ಷನಾಯಕ ಜಗದೀಶ್ ಶೆಟ್ಟರ್ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಐಟಿ ಸ್ವಾಯತ್ತ ಸಂಸ್ಥೆಯಾಗಿದೆ. ಐಟಿ ಮೇಲೆ ಎಸಿಬಿ ಮುಖಾಂತರ ದಾಳಿ ಮಾಡಿಸಲು ಹೊರಟಿದ್ದು ಖಂಡನೀಯ. ಸಿಎಮ್ ಕೇಂದ್ರದೊಂದಿಗೆ ಸಂಘರ್ಷಕ್ಕೆ ಇಳಿಯಲು ಹೊರಟಿದ್ದಾರೆ. ಕೇಂದ್ರದ ಸ್ವಾಯತ್ತ ಸಂಸ್ಥೆಯ ಮೇಲೆ ದಾಳಿ ಮಾಡಲು ಎಳ್ಳಷ್ಟು ಅವಕಾಶವಿಲ್ಲ.ಸಿಎಮ್ ಅಧೀನದಲ್ಲಿರುವ ಎಸಿಬಿ ನಡೆ ಹಲವು ಅನುಮಾನಕ್ಕೆ ಕಾರಣವಾಗಿದೆ. ಯಡಿಯೂರಪ್ಪನವರನ್ನು ಬಂಧಿಸಲು ಹೊರಟಿದ್ದರು. ತಮ್ಮ ಅಭಿಲಾಷೆ ಈಡೇರಿಸಿಕೊಳ್ಳಲು ಎಸಿಬಿ ದುರ್ಬಳಕೆ ಮಾಡುತ್ತಿದ್ದಾರೆ. ಸಿಐಡಿ ಮುಖಾಂತರ ಭ್ರಷ್ಟ ಸಚಿವರು, ಶಾಸಕರಿಗೆ ಕ್ಲೀನ್‌ಚಿಟ್ ಕೊಡಿಸಲಾಗಿದೆ ಎಂದರು. ಸಿದ್ಧರಾಮಯ್ಯ ಮೂಲ ಕಾಂಗ್ರೆಸ್‌ನವರನ್ನು ಮೂಲೆಗುಂಪು ಮಾಡಿದ್ದಾರೆ.ವಲಸೆ ಬಂದು ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಿದ್ದಾರೆ. ಸಿದ್ಧರಾಮಯ್ಯನವರದ್ದು ಮನ್ ಕಿ ಬಾತ್, ಕಾಮ್ ಕಿ ಬಾತ್ ಯಾವುದೂ ಇಲ್ಲ. ರಾಜ್ಯ ಸರ್ಕಾರ ಸಾಲಮನ್ನಾ ಹೆಸರಲ್ಲಿ ರೈತರಿಗೆ ಮೋಸ ಮಾಡಿದೆ. ಹದಿನಾಲ್ಕು ಕಂಡೀಷನ್ ಹಾಕಿ ಸಾಲಮನ್ನಾ ಮಾಡಿದ್ದಾರೆ.ಡಿವೈಎಸ್‍ಪಿ ಗಣಪತಿ ಸಾವು ಪ್ರಕರಣದ ಸಾಕ್ಷ್ಯ ನಾಶ ಮಾಡಿದ್ದಾರೆ. ಕೆ.ಜೆ. ಜಾರ್ಜ್ ತಕ್ಷಣ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಬಿಜೆಪಿಯನ್ನು ಅನುಕರಣೆ ಮಾಡಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡುತ್ತಿದ್ದಾರೆ. ಹು-ಧಾ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ. ಪಾಲಿಕೆಗೆ ಬರಬೇಕಾದ 137 ಕೋಟಿ ರೂಪಾಯಿ ಪಿಂಚಣಿ ಹಣ ಕೂಡಲೇ ಬಿಡಗಡೆ ಮಾಡಬೇಕು. ರಾಜ್ಯ ಸರ್ಕಾರ ಧಾರವಾಡ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗೆ ಬೇಕಾದ ಹಣ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: