ಕರ್ನಾಟಕ

ಕೇರಳದಲ್ಲಿ ನಡೆದ ಜನರಕ್ಷಾ ಯಾತ್ರೆಯಲ್ಲಿ ಮೈಸೂರು-ಚಾಮರಾಜನಗರದ ಪ್ರಮುಖರು ಭಾಗಿ

ರಾಜ್ಯ(ಚಾಮರಾಜನಗರ)ಅ.6:- ಕೇರಳದಲ್ಲಿ ಇಂದು 10,000 ಕ್ಕೂ ಹೆಚ್ಚಿನ ಬಿಜೆಪಿ ಯುವಕಾರ್ಯಕರ್ತರು ಹೊರರಾಜ್ಯಗಳ ಮೂಲೆ ಮೂಲೆಗಳಿಂದ ಬಂದು ಕೇಸರಿಯ ಧ್ವಜವನ್ನು ಹಾರಿಸುವುದರೊಂದಿಗೆ ಜನರಕ್ಷಾ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.  ಮೈಸೂರು ಚಾಮರಾಜನಗರ ಜಿಲ್ಲೆಗಳಿಂದ ಸುಮಾರು 150 ಕ್ಕೂ ಹೆಚ್ಚಿನ ಯುವಕಾರ್ಯಕರ್ತರು ಈ ಯಾತ್ರೆಯಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.

ಈ ಜನರಕ್ಷಾ ಯಾತ್ರೆಯಲ್ಲಿ ಕೇರಳ ಬಿ.ಜೆ‌.ಪಿ ಅಧ್ಯಕ್ಷ ಕುಮಣಂ ರಾಜಶೇಖರನ್,ಕೇಂದ್ರ ಸಚಿವ ಅರ್ಜುನ್ ಸಿಂಗ್,ಮೈಸೂರು ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಎಲ್.ಆರ್ ಮಹದೇವಸ್ವಾಮಿ,ನಗರ ಘಟಕದ ಅಧ್ಯಕ್ಷ ಗೋಕುಲ್,ವರುಣಾ ಅಧ್ಯಕ್ಷ ಕಾರ್ತಿಕ್,ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಉದಯ್ ದಳಪತಿ,ತೇಜಸ್ವಿಸೂರ್ಯ,ತಮ್ಮೇಶ್ ಗೌಡ,ರವಿ ಕುಮಾರ್, ಇನ್ನೂ ನೂರಾರು ಮೈಸೂರಿನ ಕಾರ್ಯಕರ್ತರು ಭಾಗವಹಿಸಿದ್ದರು. ಚಾಮರಾಜನಗರ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಣಯ್ ಹೆಚ್.ಎಂ.ಹಂಗಳ,ಹೆಚ್.ಡಿ ಕೋಟೆ ಯುವಮೋರ್ಚಾ ಪ್ರಧಾನಕಾರ್ಯದರ್ಶಿ ನಂದೀಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: