ಮೈಸೂರು

ಎಚ್‍ಡಿಕೆ ವಿರುದ್ಧ ಭೂಮಿ ಕಬಳಿಕೆ ಆರೋಪ

ಯಡಿಯೂರಪ್ಪ ಸೇರಿದಂತೆ 13 ಮಂದಿ ಪ್ರಕರಣದಿಂದ ಖುಲಾಸೆ ಪ್ರಕರಣದಲ್ಲಿ ಭ್ರಷ್ಟಾಚಾರದ ವಾಸನೆ ಬಂದಿದೆ. ವಿಧಾನಸೌಧದಲ್ಲಿ ಅ.21 ರಂದು ವಕೀಲ ಸಿದ್ದಾರ್ಥ ಸಾಗಿಸುತ್ತಿದ್ದ ಲೆಕ್ಕವಿಲ್ಲದಷ್ಟು 1.97 ಕೋಟಿ ರೂ. ಪ್ರಕರಣಕ್ಕೂ ಖುಲಾಸೆ ಆಗಿದ್ದಕ್ಕೂ ಸಂಬಂಧವಿದೆ. ವಕೀಲ ಸಿದ್ದಾರ್ಥ ಬಿ.ಎಸ್, ಯಡಿಯೂರಪ್ಪ ವಕೀಲರು, ಹಾಗಾಗಿ ನ್ಯಾಯಮೂರ್ತಿಗಳಿಗೆ ತಲುಪಿಸುವ ಸಲುವಾಗಿಯೇ ಸಾಗಿಸಲಾಗುತ್ತಿತ್ತು ಎಂಬ ಬಲವಾದ ಸಂದೇಹವಿದೆ ಎಂದು ಸಮಾಜ ಪರಿವರ್ತನಾ ಟ್ರಸ್ಟ್ನ ಎಸ್.ಆರ್. ಹೀರೇಮಠ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಮೀನು ಕಬಳಿಕೆಯ ಆರೋಪ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ಹಾಗೂ ಅವರ ಹತ್ತಿರದ ಸಂಬಂಧಿ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಮತ್ತು ಅವರ ಕುಟುಂಬದವರು ಸರ್ಕಾರಿ ಗೋಮಾಳ ಸೇರಿ ಒಟ್ಟು 200 ಎಕರೆ ಜಮೀನನ್ನು ರಾಮನಗರದ ಕೇತಿಗಾನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಕಬಳಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕರ್ನಾಟಕ ಲೋಕಾಯುಕ್ತ ಆದೇಶ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನೈಸರ್ಗಿಕ ಸಂಪನ್ಮೂಲಗಳ ರಕ್ಷಣಾ ರಾಷ್ಟ್ರೀಯ ಸಮಿತಿ ಮತ್ತು ಜನಸಂಗ್ರಾಮ ಸಮಿತಿಯು ಆಗ್ರಹಿಸುತ್ತದೆ ಎಂದು  ಹೇಳಿದರು.

ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆದಿದೆ, ಲೋಕಾಯುಕ್ತ ವರದಿ ಉಲ್ಲೇಖ ಮಾಡಿದೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ವರದಿ ಸಲ್ಲಿಕೆಯಾಗಿದೆ. ಆದರೆ, ಈ ತನಕ ಕ್ರಮ ಕೈಗೊಂಡಿಲ್ಲ. ರಾಮನಗರ ಡಿಸಿ ಮಮತಾ ಅವರಿಂದ ವರದಿಯ ನಿರ್ಲಕ್ಷ್ಯ, ಭ್ರಷ್ಟಾಚಾರಕ್ಕೆ ಅಧಿಕಾರಿಗಳ ಸಾಥ್, ದೇವೇಗೌಡರು ಹಾಗೂ ಅವರ ಕೆಲಸದ ಬಗ್ಗೆ ನನಗೆ ಗೌರವವಿದೆ. ಆದರೆ ತಮ್ಮ ಮಕ್ಕಳು ಸಂಬಂಧಿಕರಿಂದ ಆಗಿರುವ ಭೂಕಬಳಿಕೆ ಬಗ್ಗೆ ಚಿಂತಿಸಬೇಕು. ಎಸ್ಸಿ/ಎಸ್ಟಿ ಭೂಮಿಯನ್ನು ಕಬಳಿಸಿದ್ದು, ಅದನ್ನು ವಾಪಸ್ ಕೊಡಿಸಬೇಕೆಂದು ಕಳಕಳಿಯಾಗಿ ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ಲಂಚಮುಕ್ತ ಕರ್ನಾಟಕ ವೇದಿಕೆಯ ರವಿಕೃಷ್ಣಾರೆಡ್ಡಿ ಹಾಜರಿದ್ದರು.

 

Leave a Reply

comments

Related Articles

error: