ಕರ್ನಾಟಕಮೈಸೂರು

ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ ಅಧಿವೇಶನ

ಸೂರತ್ಕಲ್ ರೋಟರಿ ಕ್ಲಬ್  ವತಿಯಿಂದ ನ್ಯಾಷನಲ್ ತಾಂತ್ರಿಕ ವಿದ್ಯಾಲಯದಲ್ಲಿ  ಈಚೆಗೆ ‘ರೋಟರಿ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ 3181ನ ಕ್ಲಬ್ ನ  ಮೊದಲ ರೋಟ್ರಾಕ್ಟ್ ‘ಜಿಲ್ಲಾ ಅಧಿವೇಶನ’ ಜರುಗಿತು.

ರೋಟ್ರಾಕ್ಟ್ ಸಂಸ್ಥೆಯ 2016-17ನೇ ಸಾಲಿನ ಜಿಲ್ಲಾ ಪ್ರತಿನಿಧಿಯಾಗಿ ನೂತನವಾಗಿ ಆಯ್ಕೆಯಾದ ಹಿತೈಷಿ  ಹಾಗೂ ತಂಡದ ಸದಸ್ಯರಿಗೆ  ಜಿಲ್ಲಾ ಗವರ್ನರ್ ಡಾ.ಆರ್.ಎಸ್. ನಾಗಾರ್ಜುನ್  ಪ್ರತಿಜ್ಞಾ ವಿಧಿ ಬೋಧಿಸಿದರು, ಮಾಜಿ ಜಿಲ್ಲಾ ಗವರ್ನರ್ ಸೂರ್ಯ ಪ್ರಕಾಶ್ ಭಟ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸೂರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ಶ್ರೀನಿವಾಸ ರಾವ್, ಕಾರ್ಯದರ್ಶಿ ಕಿರಣ್ ಭಟ್ , ರೋಟ್ರಾಕ್ಟ್ ಕ್ಲಬ್ ನ 2016-17ನೇ ಸಾಲಿನ ಜಿಲ್ಲಾ ಪ್ರತಿನಿಧಿ ಹಿತೈಷಿ ಹಾಗೂ ಇತರರು  ಉಪಸ್ಥಿತರಿದ್ದರು.

ರೋಟ್ರಾಕ್ಟರ್ ಡಿಸ್ಟ್ರಿಕ್ಟ್ 3181ಗೆ ಮೈಸೂರು, ಕೊಡಗು, ಚಾಮರಾಜನಗರ ಮತ್ತು ದಕ್ಷಿಣ ಕನ್ನಡದ ರೋಟರಿ ಕ್ಲಬ್ ಗಳು ಒಳಪಡಲಿವೆ, ಮೊದಲ ಅಧಿವೇಶನದಲ್ಲಿ ‘ಜೀವನದಲ್ಲಿ ಎದುರಾಗುವ ಸಮಸ್ಯೆಗಳು’ ಕುರಿತು ಗೋಪಿನಾಥ್, ‘ನಾಳಿನ ನಾಯಕರು’ ಬಗ್ಗೆ ಪ್ರೀತಮ್ , ಸಮೂಹದೊಂದಿಗೆ ಸಂಪರ್ಕ ಕುರಿತು ವಿದ್ಯಾ ದಿನಕರ್, ‘ಸಂವಹನ ಹಾಗೂ ಸಾಮ್ಯತೆ’ ಕುರಿತು ಕಾಸರಗೊಡು ಚಿನ್ನ ಉಪನ್ಯಾಸ ನೀಡಿದರು.

Leave a Reply

comments

Related Articles

error: