ಮೈಸೂರು

ನಿಗೂಢ ಶಬ್ದಕ್ಕೆ ಬೆಚ್ಚಿಬಿದ್ದ ಜನತೆ

ಮೈಸೂರು,ಅ.7:- ಶನಿವಾರ  ಬೆಳ್ಳಂ ಬೆಳಗ್ಗೆ ನಿಗೂಢ ಶಬ್ದಕ್ಕೆ ಜನತೆ ಬೆಚ್ಚಿಬಿದ್ದ ಘಟನೆ ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ನಡೆದಿದೆ.

ಕುಂಬಾರಕೊಪ್ಪಲಿನ ಮಂಜು ಎಂಬವರ ಮನೆಯಲ್ಲಿ ಈ ಶಬ್ದ ಕೇಳಿ ಬಂದಿದ್ದು, ನಿಗೂಢ ಶಬ್ದಕ್ಕೆ ಮನೆಯ ಕಿಟಕಿಗಳು ಛಿದ್ರ ಛಿಧ್ರಗೊಂಡಿವೆ. ಕಟ್ಟಡ ಬಿರುಕುಬಿಟ್ಟಿದೆ. ಅಕ್ಕಪಕ್ಕದ ಮನೆಗಳಿಗೂ ಹಾನಿಯುಂಟಾಗಿದೆ. ಎರಡೂ ಕಿಮೀ ವರೆಗೂ ಶಬ್ದ ಆವರಿಸಿದ್ದು, ಶಬ್ದಕ್ಕೆ ಕಾರಣ ತಿಳಿದುಬಂದಿಲ್ಲ. ಮನೆಯವರಿಲ್ಲದ ವೇಳೆ ಭೀಕರ ಶಬ್ದವುಂಟಾಗಿದೆ. ಶಬ್ದಕ್ಕೆ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ತೆರಳಿದ್ದು  ಪರಿಶೀಲನೆ  ನಡೆಸಿದ್ದಾರೆ.  ಶಬ್ದಕ್ಕೆ ಕಾರಣ ತಿಳಿದು ಬಂದಿಲ್ಲ ಎನ್ನಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: