ಮೈಸೂರು

ಮರದ ಕೊಂಬೆಗಳನ್ನು ಕತ್ತರಿಸುವ ಮೂಲಕ ತೆರವು ಕಾರ್ಯಾಚರಣೆ

ಮೈಸೂರು,ಅ.7:- ಮೈಸೂರು ಕುಕ್ಕರಹಳ್ಳಿ ಕೆರೆಯ ಪಕ್ಕದಲ್ಲಿರುವ ಬೃಹತ್ ಆಲದ ಮರದ ಕೊಂಬೆಗಳನ್ನು ಕತ್ತರಿಸುವ ಮೂಲಕ  ಮನಪಾ ಅಭಯತಂಡ ತೆರವು ಕಾರ್ಯಾಚರಣೆ ನಡೆಸಿದೆ.

ಕಳೆದ ಕೆಲವುದಿನಗಳಿಂದ ಸುರಿದ ಭಾರೀ ಮಳೆಗೆ ಮರದ ಕೊಂಬೆಗಳು ವಾಲಿದ್ದು, ಸಂಚರಿಸುವವರ ಮೇಲೆ ಬೀಳುವ ಪರಿಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಮಹಾನಗರಪಾಲಿಕೆಗೆ ಮಾಹಿತಿ ನೀಡಿದ್ದು, ಇದೀಗ ಮಹಾನಗರಪಾಲಿಕೆಯ ಅಭಯತಂಡ ತೆರವು ಕಾರ್ಯಾಚರಣೆಯಲ್ಲಿ ನಿರತವಾಗಿದೆ. ನಗರದ ಹಲವೆಡೆ ಇದೇ ರೀತಿ ಮರದ ಕೊಂಬೆಗಳು ವಾಲಿದ್ದು ಅವುಗಳನ್ನು ಕೂಡ ತೆರವುಗೊಳಿಸಲು ಮುಂದಾಗಿದೆ. ಯಾಕೆಂದರೆ ಕಳೆದ ಕೆಲವು ದಿನಗಳ ಮಳೆಗೆ ಬಳ್ಳಾಲ್ ಭಾಗ್  ಬಳಿ ನಿಲ್ಲಿಸಲಾಗಿದ್ದ ವಾಹನಗಳು ಜಖಂಗೊಂಡಿದ್ದವು. ಅದೃಷ್ಟವಶಾತ್ ವಾಹನದಲ್ಲಿ ಯಾರೂ ಇಲ್ಲದ್ದರಿಂದ ಪ್ರಾಣಹಾನಿ ತಪ್ಪಿತ್ತು.

ಅದರಿಂದ ಮುಂದೆ ಯಾವುದೇ ಅನಾಹುತವಾಗಬಾರದು ಎಂಬ ಹಿನ್ನೆಲೆಯಲ್ಲಿ ವಾಲಿದ ಮರದ ರೆಂಬೆಗಳನ್ನು ಕತ್ತರಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಾಲ್ಕು ಗ್ಯಾಂಗ್ ಮನ್ ಗಳ ಸಹಾಯದಿಂದ ಮಹಾನಗರಪಾಲಿಕೆಯ ಅಭಯ ತಂಡ  ಈ ಕಾರ್ಯಾಚರಣೆಗಿಳಿದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: