ಮನರಂಜನೆ

ಮನೆತುಂಬಿದ ಸೊಸೆ ಮಾವ ನಾಗಾರ್ಜುನನಿಗೆ ಪ್ರೇತಾತ್ಮವಾಗಿ ಕಾಣಿಸಿಕೊಳ್ಳಲಿದ್ದಾರೆ..!

ದೇಶ(ಚೆನ್ನೈ)ಅ.7:- ತೆಲುಗು ಸೂಪರ್ ಸ್ಟಾರ್ ನಾಗಾರ್ಜುನ ಅಕ್ಕಿನೇನಿ ಯ ಪುತ್ರ ನಾಗಚೈತನ್ಯನೊಂದಿಗೆ ನಟಿ ಸಾಮಂತಾ ರೂಥ್ ಪ್ರಭು ವಿವಾಹ ಅದ್ಧೂರಿಯಾಗಿ ನಡೆದಿದೆ. ಆದರೆ ಮನೆತುಂಬಿದ ಸೊಸೆ ಮಾವ ನಾಗಾರ್ಜುನನಿಗೆ ಪ್ರೇತಾತ್ಮವಾಗಿ ಕಾಣಿಸಿಕೊಂಡು ಭಯಹುಟ್ಟಿಸಲಿದ್ದಾರಂತೆ..!

ನಾಗಚೈತನ್ಯ ಮತ್ತು ಸಾಮಂತಾ ವಿವಾಹ ಅದ್ಧೂರಿಯಾಗಿ ನಡೆದಿದೆ. ಆದರೆ  ಪ್ರೇತಾತ್ಮವಾಗಿ  ಕಾಣಿಸಿಕೊಳ್ಳುವ ವಿಚಾರ ಅವರ ಮನೆ ವಿಷಯವಲ್ಲ. ಸಿನಿಮಾಕ್ಕೆ ಸಂಬಂಧಿಸಿದ್ದು. ನಟ ನಾಗಾರ್ಜುನ ಅಕ್ಕಿನೇನಿ ಮತ್ತು ನಟಿ ಸಾಮಂತಾ ರೂಥ್ ಪ್ರಭು ನಟಿಸಿರುವ ಚಿತ್ರ ರಾಜು ಗಾರಿ ಗಾಡಿ-2 ಅಕ್ಟೋಬರ್ 13ರಂದು ತೆರೆಕಾಣಲಿದೆ. ಇದು 2016ರಲ್ಲಿ ತೆರೆಕಂಡ ಮಲಯಾಳಂ ಚಿತ್ರ ಪ್ರೇತಂ ನ ರಿಮೇಕ್ ಆಗಿದೆ. ನಾಗಾರ್ಜುನ್ ಇದರಲ್ಲಿ ತಾಂತ್ರಿಕನಾಗಿ ಕಾಣಿಸಿಕೊಳ್ಳಲಿದ್ದು, ಸಾಮಂತಾ ಪ್ರೇತಾತ್ಮವಾಗಿ ಕಾಣಿಸಿಕೊಳ್ಳಲಿದ್ದಾಳೆ. ತನ್ನ ತಂತ್ರ-ಮಂತ್ರಗಳಿಂದ ಅವಳನ್ನು ನಿಯಂತ್ರಣಕ್ಕೆ ತರಲು ಯತ್ನಿಸುತ್ತಾರಂತೆ ನಾಗಾರ್ಜುನ್. ಆದರೆ ಸಾಮಂತಾ ನಾಗಾರ್ಜುನ್ ಗೆ ಭಯ ಹುಟ್ಟಿಸಲಿದ್ದಾರಂತೆ. ಈ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. (ಎಸ್.ಎಚ್)

Leave a Reply

comments

Related Articles

error: