ಪ್ರಮುಖ ಸುದ್ದಿ

ಮೋದಿಯನ್ನು ಮದುವೆಯಾಗಬೇಕೆಂದು ಧರಣಿ ನಡೆಸುತ್ತಿರುವ ಮಹಿಳೆ

ಪ್ರಮುಖ ಸುದ್ದಿ, ನವದೆಹಲಿ, ಅ.೭: ಸಿನಿಮಾ ನಟರನ್ನು, ಕ್ರೀಡಾ ತಾರೆಯರನ್ನು ಹುಡುಗಿಯರು ಮದುವೆಯಾಗಬೇಕೆಂದು ಬಯಸುವುದು ಸಹಜ. ಆದರೆ ಇಲ್ಲೊಬ್ಬ ಮಹಿಳೆ ಮದುವೆಯಾಗಬೇಕು ಎಂದು ಬಯಸುತ್ತಿರುವುದನ್ನು ಕೇಳಿದರೆ ಎಂತಹವರಿಗೂ ಒಂದರೆಗಳಿಗೆ ಶಾಕ್ ಆಗುತ್ತದೆ.
ಹೌದು ರಾಜಸ್ಥಾನದ ಜೈಪುರ ಮೂಲದ ಓಂ ಶಾಂತಿ ಶರ್ಮಾ ಎಂಬ ೪೦ ವರ್ಷದ ಮಹಿಳೆ ಪ್ರಧಾನಿ ಮೋದಿಯನ್ನು ಮದುವೆಯಾಗಬೇಕೆಂದು ಕಳೆದ ಒಂದು ತಿಂಗಳಿನಿಂದ ದೆಹಲಿಯ ಜಂತರ್ ಮಂತರ್ ಬಳಿ ಧರಣಿ ಕುಳಿತಿದ್ದಾರೆ. ಸೆ.೮ ರಿಂದ ಧರಣಿ ಕುಳಿತಿರುವ ಈ ಮಹಿಳೆ ಮೋದಿ ಸೇವೆ ಸಲ್ಲಿಸಬೇಕು ಎಂದು ಬಯಸುತ್ತಿದ್ದಾರೆ. ಮೋದಿಯವರನ್ನು ನೋಡಲು ಬಿಡುವುದಿಲ್ಲ. ಅವರಿಗೆ ಬಿಡುವಿಲ್ಲದಷ್ಟು ಕೆಲಸಗಳಿರುತ್ತವೆ. ಹಾಗಾಗಿ ಅವರ ಸೇವೆ ಮಾಡಲು ನನಗೆ ಅವಕಾಶ ಬೇಕು. ಅದಕ್ಕಾಗಿ ಮದುವೆಯಾಗಲು ಬಯಸಿzನೆ. ಹಾಗಂತ ನನಗೆ ಮಾನಸಿಕ ಅಸ್ವಸ್ಥತೆಯಿಲ್ಲ. ಮಾನಸಿಕವಾಗಿ ಸದೃಢವಾಗಿzನೆ. ನನಗೆ ಈ ಹಿಂದೆ ಮದುವೆಯಾಗಿತ್ತು. ಆದರೆ ಆ ಸಂಬಂಧ ತುಂಬಾ ಕಾಲ ಉಳಿಯಲಿಲ್ಲ. ಕಳೆದ ಹಲವು ವರ್ಷಗಳಿಂದ ನಾನು ಒಂಟಿಯಾಗಿzನೆ. ಸಾಕಷ್ಟು ಮದುವೆ ಪ್ರಸ್ತಾಪಗಳನ್ನು ನಿರಾಕರಿಸಿzನೆ. ಈಗ ನರೇಂದ್ರ ಮೋದಿಯವರನ್ನು ಮದುವೆಯಾಗಲು ಇಲ್ಲಿ ಧರಣಿ ಕುಳಿತ್ತಿzನೆ ಎಂದು ಹೇಳುತ್ತಾರೆ.
ನನಗೆ ೨೦ ವರ್ಷದ ಮಗಳಿದ್ದಾಳೆ. ಜೀವನ ನಿರ್ವಹಣೆಗೆ ಯಾವ ತೊಂದರೆಯೂ ಇಲ್ಲ. ನನ್ನ ಬಳಿ ಸಾಕಷ್ಟು ಭೂಮಿ ಹಾಗೂ ಹಣ ಇದೆ. ನನಗೆ ಜೈಪುರದಲ್ಲಿ ಸಾಕಷ್ಟು ಭೂಮಿ ಇದೆ. ಅದರಲ್ಲಿ ಸ್ವಲ್ಪ ಮಾರಾಟ ಮಾಡಿ ಮೋದಿ ಅವರಿಗೆ ಉಡುಗೊರೆ ನೀಡಬೇಕೆಂದಿzನೆ. ಅವರ ಮೇಲಿನ ಮೋಹದಿಂದ ಮದುವೆಯಾಗಲು ಬಯಸುತ್ತಿಲ್ಲ. ಹಿರಿಯರ ಬಗೆಗೆ ನನಗೆ ಗೌರವವಿದೆ. ಅವರ ಸೇವೆ ಮಾಡಲೆಂದೆ ಮದುವೆಯಾಗಲು ಬಯಸುತ್ತಿದ್ದು, ಮೋದಿ ಅವರು ಬಂದು ನನ್ನನ್ನು ಭೇಟಿಯಾಗುವವರೆಗೆ ಧರಣಿ ಮುಂದುವರಿಸುತ್ತೇನೆ ಎಂದು ಪಟ್ಟುಹಿಡಿದಿದ್ದಾರೆ. (ವರದಿ ಬಿ.ಎಂ)

 

Leave a Reply

comments

Related Articles

error: