ಕರ್ನಾಟಕಪ್ರಮುಖ ಸುದ್ದಿಮೈಸೂರು

ಮಾಜಿ ಸಚಿವ ವಿಜಯಶಂಕರ್ ಪಕ್ಷ ತೊರೆಯುವುದಿಲ್ಲ : ಮಾಜಿ ಸಚಿವ ಕೋಟೆ ಎಂ.ಶಿವಣ್ಣನವರ ಸ್ಪಷ್ಟನೆ

ಮೈಸೂರು,ಅ.7 (ವಿಶೇಷ ಸಂದರ್ಶನ) : ಮುಂಬರುವ ವಿಧಾನಸಭಾ ಚುನಾವಣಾ ಪೂರ್ವದಲ್ಲಿಯೇ ಪಕ್ಷಾಂತರ ಪರ್ವ ಆರಂಭವಾಗಿದ್ದು,  ಪಕ್ಷದ ಪ್ರಭಾವಿಗಳನ್ನು ಸೆಳೆಯುವ ರಾಜಕೀಯ ದೊಂಬರಾಟ ನಡೆಯುತ್ತಿದೆ. ಈಗ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಅವರ ಸರದಿಯಾಗಿದ್ದು, ಬಿಜೆಪಿಯಿಂದ ಕಾಂಗ್ರೆಸ್ ಗೆ ಸೆಳೆಯಲು ಸಿಎಂ ಸಿದ್ದರಾಮಯ್ಯನವರು ನೇರ ಮಾತು ನಡೆಸಿದ್ದು, ಮತ್ತೊಂದೆಡೆ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳು ಪ್ರಯತ್ನ ನಡೆಯುತ್ತಿದೆ ಈ ಬಗ್ಗೆ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಕೋಟೆ ಎಂ ಶಿವಣ್ಣರೊಂದಿಗೆ ‘ಸಿಟಿಟುಡೆ’ ನಡೆಸಿದ ಮಾತುಕತೆ ಈ ರೀತಿ ಇದೆ.

ಜಿಲ್ಲೆಯಲ್ಲಿ  ಪಕ್ಷ ಸಂಘಟನೆಗೆ ಯಾವ ಕ್ರಮ ಕೈಗೊಂಡಿದೆ?

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೈಸೂರಿಗೆ ಭೇಟಿ ನಂತರ ಬೂತ್ ಮಟ್ಟದ ಪಕ್ಷ ಸಂಘಟನೆ  ಹಲವಾರು  ಮುಂಬರುವ ವಿಧಾನಸಭಾ ಚುನಾವಣೆ ಸಿದ್ಧತೆ ಹಿನ್ನಲೆಯಲ್ಲಿ ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸುವ  ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಬಿಜೆಪಿಯು ಆಯೋಜಿಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಗ್ರಾಮಾಂತರ ಜಿಲ್ಲಾಧ್ಯಕ್ಷ ಕೋಟೆ ಎಂ. ಶಿವಣ್ಣ ತಿಳಿಸಿದರು.

ಪ್ರತಿ ಬೂತ್ ನಲ್ಲಿ 32 ಜನರನ್ನು ನೇಮಕ ಮಾಡಿಕೊಂಡು ಬೂತ್ ಸಂಘಟನೆ ಮಾಡಿ ಪಕ್ಷವನ್ನು ಬಲಪಡಿಸಲಾಗುವುದು. ಪಕ್ಷದ ವರಿಷ್ಠ ಅಮಿತ್ ಶಾ ಬಂದು ಹೋದನಂತರ ರಾಜ್ಯದಲ್ಲಿ ಪಕ್ಷದ ಸಂಘಟನೆಯು ಬಲವಾಗುತ್ತಿದೆ. ರಾಜ್ಯದ ಉಸ್ತುವಾರಿಯಾಗಿ ಜಾವಡ್ಕೇರ್ ಹಾಗೂ ಪಿ.ಎಸ್.ಗೋಯಲ್ ರವರ ನೇಮಕವಾದ ನಂತರ ಪಕ್ಷ ಸಂಘಟನೆಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಬಿಜೆಪಿಯು ಪ್ರಬಲವಾಗಿದೆ, ಮುಂಬರುವ ಚುನಾವಣೆಗೆ ಬಿಜೆಪಿಗೆ ಮತ ನೀಡಲು ಮತದಾರರು ಒಲವು ತೋರುತ್ತಿದ್ದಾರೆ,

ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ  ವಿಜಯಶಂಕರ್ ಪಕ್ಷ ತೊರೆಯುವರೆ?

ಮಾಜಿ ಸಚಿವ, ಬಿಜೆಪಿ ಮುಖಂಡ ವಿಜಯಶಂಕರ್ ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲವೆಂದು ಅವರಲ್ಲಿದ್ದ ಅಸಮಧಾನವನ್ನು ಮಾತುಕತೆಯ ಮೂಲಕ ನಿವಾರಿಸಲಾಗಿದೆ. ಅವರಲ್ಲಿರುವ ಸಣ್ಣಪುಟ್ಟ ಅಸಮಮಾಧಾನದ ಬಿನ್ನತೆ  ಬಗ್ಗೆ ಜಿಲ್ಲಾಧ್ಯಕ್ಷನಾಗಿ ನಾನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದ್ದು, ಪಕ್ಷವನ್ನು ಕಟ್ಟಿ ಬೆಳೆಸಿದ ನೀವು ಯಾವುದೇ ಕಾರಣಕ್ಕೂ ಪಕ್ಷ ತೊರೆಯಬಾರದು ಎಂದು ಮನವಿ ಮಾಡಲಾಗಿದೆ.

ಅಲ್ಲದೇ  ರಾಜ್ಯದ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಅವರು ಅವರೊಂದಿಗೆ ಮಾತುಕತೆ ನಡೆಸಿ ಪಕ್ಷ ತೊರೆಯದಂತೆ ಮನವಿ ಮಾಡಲಾಗಿದೆ ಇನ್ನೆರಡು ದಿನಗಳಲ್ಲಿ ಎಲ್ಲಾ ಗೊಂದಲಗಳಿಗೆ ತೆರೆಬೀಳಲಿದೆ.

ಬಿಜೆಪಿ ಉದ್ಯಮಿಗಳಿಗೆ ಮಣೆ ಹಾಕುತ್ತಿದೇಯಾ ?

ಸಣ್ಣಪಟ್ಟು ಭಿನ್ನಮತ, ಬಿನ್ನಾಭಿಪ್ರಾಯ ಎಲ್ಲಾ ಪಕ್ಷಗಳಲ್ಲಿಯೂ ಇದೆ, ಪಕ್ಷದಲ್ಲಿ ಕೇವಲ ನಿಷ್ಠಾವಂತರಿಗೆ ಮಾತ್ರ ಅವಕಾಶವಿದೆ,ಜಿಲ್ಲಾಧ್ಯಕ್ಷನಾಗಿ ನಾನು ಪಕ್ಷ ನಿಷ್ಠಾವಂತರ ಪಟ್ಟಿಯನ್ನು ರಾಜ್ಯದ ಮುಖಂಡರಿಗೆ ನೀಡಲಾಗಿದೆ. ಪ್ರಾಮಾಣಿಕರಿಗೆ, ಸಾರ್ಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವವರಿಗೆ. ಟಿಕೆಟ್ ನೀಡುವ ಬಗ್ಗೆ ಪಕ್ಷವೂ ಅಧಿಕೃತವಾಗಿ ಪ್ರಕಟಿಸಿಲ್ಲ.

ಪಿರಿಯಾ ಪಟ್ಟಣದಲ್ಲಿ ಎರಡು ಕಚೇರಿಗಳಿಗೆ ಕಾರಣವೇನು ?

ಉದ್ಯಮಿ ಮಂಜುನಾಥ ತಮ್ಮ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿಯವರ ಭಾವಚಿತ್ರಗಳನ್ನು ಹಾಕಿಕೊಂಡಿದ್ದು ಆದು ಪಕ್ಷದ ಕಚೇರಿಯಲ್ಲ, ಅಧಿಕೃತ ಕಚೇರಿಯಿರುವುದು ಒಂದೇ ಎಂದು ಸ್ಪಷ್ಟಪಡಿಸಿದ ಅವರು.ಉದ್ಯಮಿ ಮಂಜುನಾಥ್ ಗೆ ಪಕ್ಷ ಸಂಘಟನೆ ಉಸ್ತುವಾರಿಯನ್ನು ನೀಡಲಾಗಿದೆ ಹೊರತು ಅವರು ಅಭ್ಯರ್ಥಿಯಲ್ಲ ಈ ಬಗ್ಗೆ ಕೇವಲ ವದಂತಿ ಹಬ್ಬಿದೆ ಎಂದು ವಿವಾದಕ್ಕೆ ತೆರೆ ಎಳೆದರು.

ಮುಂದಿನ ಚುನಾವಣೆಯಲ್ಲಿ ಉದ್ಯಮಿ ಮಂಜುನಾಥ ಎಂಬುವವರು ತಾನೇ ಪಿರಿಯಾಪಟ್ಟಣ ಕ್ಷೇತ್ರದ ಅಭ್ಯರ್ಥಿಯೆಂದು ಹೇಳಿಕೊಂಡು ಓಡಾಡುತ್ತಿದ್ದು, ವಿಚಾರವಾಗಿ ವಿಜಯಶಂಕರ್ ಅವರಿಗೆ ಅಸಮಾಧಾನವಾಗಿ ಬೇಸರಗೊಂಡಿದ್ದಾರೆ. ಅವರನ್ನು ಪಕ್ಷದ ಎಲ್ಲಾ ಮುಖಂಡರು ಸಂಪರ್ಕಿಸಿ ಮಾತನಾಡಿದ್ದು ಅವರ ಅಸಮಾಧಾನವನ್ನು ನಿವಾರಿಸಲಾಗಿದೆ.

ಪಕ್ಷದ ಹಿರಿಯ ಮುಖಂಡ ವಿಜಯಶಂಕರ್ ಅವರಿಗೆ ಬಿಜೆಪಿಯೂ ಸಂಸದ, ಸಚಿವ ಸೇರಿದಂತೆ ಎಲ್ಲಾ ಉನ್ನತ ಸ್ಥಾನಮಾನ ನೀಡಿದೆ. ಯಾವ ಪಕ್ಷವು ಇಷ್ಟೊಂದು ಸ್ಥಾನ ಒಬ್ಬ ವ್ಯಕ್ತಿಗೆ ನೀಡಿದ ನಿದರ್ಶನಗಳಿಲ್ಲ, ಆದರೆ ಬಿಜೆಪಿಯಿಂದ ವಿಜಯಶಂಕರ್ ಅವರಿಗೆ ನೀಡಲಾಗಿದ್ದು ಈ ವಿಷಯವನ್ನು ಅವರಿಗೆ ಮನವರಿಕೆ ಮಾಡಲಾಗಿದೆ.

ಅಭ್ಯರ್ಥಿ ಆಯ್ಕೆಯ ಮಾನದಂಡವೇನು ?

ಯಾರಿಗೆ ಟಿಕೆಟ್ ನೀಡಬೇಕೆನ್ನುವುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುವರು, ಟಿಕೆಟ್ ನೀಡಲು ಹಲವು ಮಾನದಂಡಗಳಿದ್ದು, ಪಕ್ಷದ ನಿಷ್ಠಾವಂತರಾಗಿರಬೇಕು, ಪಕ್ಷಕ್ಕಾಗಿ ದುಡಿದಿರಬೇಕು. ಜನಸಾಮಾನ್ಯರೊಂದಿಗೆ ಸಂಪರ್ಕ ಹೊಂದಿದವರಾಗಿರಬೇಕು. ಪಕ್ಷದ ನಂಬಿಕೆ ಉಳಿಸಿಕೊಳ್ಳುವವರು ಇತ್ಯಾದಿ ಮಾನದಂಡಗಳನ್ನು ಪರಿಗಣಿಸಿ ಅಭ್ಯರ್ಥಿಗಳಿಗೆ ಟಿಕೆಟೆ ನೀಡಲಾಗುವುದು.

ಪಕ್ಷದ ವರಿಷ್ಠ ಅಮಿತ್ ಶಾ ಅವರು ಈಗಾಗಲೇ ಟಿಕೆಟ್ ಹಂಚಿಕೆ ನಿಟ್ಟಿನಲ್ಲಿ ಸಮೀಕ್ಷೆಯನ್ನು ಮಾಡಿಸುತ್ತಿದ್ದು ಸಮೀಕ್ಷೆ ವರದಿಯಾಧರಿಸಿ ತೀರ್ಮಾನಿಸುವರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಸನ್ನ ಗೌಡ, ಮುಖಂಡ ಬೋರೇಗೌಡ ಮೊದಲಾದವರು ಮಾಜಿ ಸಚಿವರಿಗೆ ಸಾಥ್ ನೀಡಿದರು. (ಸಂದರ್ಶನ : ಕೆ.ಎಂ.ಆರ್)

Leave a Reply

comments

Related Articles

error: