ಸುದ್ದಿ ಸಂಕ್ಷಿಪ್ತ
ಸಂಸ್ಮರಣೆ ಸಮಾರಂಭ
ನ. 6ರಂದು ಸಂಜೆ 5 ಗಂಟೆಗೆ ಕಲಾಮಂದಿರದ ಮನೆಯಂಗಳದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದ ದಿ.ಪ್ರೊ. ಕೆ.ಎಸ್. ನಂಜುಂಡಪ್ಪ ಅವರಿಗೆ ಸಂಸ್ಮರಣೆ ಸಮಾರಂಭ ಏರ್ಪಡಿಸಲಾಗಿದೆ. ಮಂಗಳೂರು ಮತ್ತು ಗೋವಾ ವಿವಿ ವಿಶ್ರಾಂತ ಕುಲಪತಿಗಳಾದ ಪ್ರೊ. ಬಿ. ಷೇಕ್ಅಲಿ ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ಸಾಹಿತಿ ಪ್ರೊ. ಸಿ.ಪಿ.ಕೆ. ನುಡಿನಮನ ಸಲ್ಲಿಸುವರು.