ಮನರಂಜನೆ

ಸಪ್ತಪದಿ ತುಳಿದು ಹೊಸ ಜೀವನಕ್ಕೆ ಕಾಲಿಟ್ಟ ಟಾಲಿವುಡ್‍ನ ಹಾಟ್ ಜೋಡಿ

ಹೈದರಾಬಾದ್,ಅ.07: ಟಾಲಿವುಡ್ ಹಾಟ್ ಕಪಲ್ ನಾಗಚೈತನ್ಯ ಮತ್ತು ಸಮಂತಾ ಜೋಡಿ ಶಾಸ್ತ್ರೋಪ್ತವಾಗಿ ಸಪ್ತಪದಿ ತುಳಿದು ಹೊಸ ಜೀವನಕ್ಕೆ ಕಾಲಿಟ್ಟಿದೆ.

ಸಮಂತಾ ಮತ್ತು ನಾಗಚೈತನ್ಯ ಅವರ ವಿವಾಹ ಕಾರ್ಯಕ್ರಮಕ್ಕೆ ಗೋವಾ ಕಡಲತೀರದಲ್ಲಿ ವಿಶೇಷವಾಗಿ ಸಿಂಗರಿಸಿದ್ದ ಮಂಟಪದಲ್ಲಿ  ಶುಕ್ರವಾರ ಹಿಂದೂ ಸಂಪ್ರದಾಯದಂತೆ ಮಂತ್ರ, ನಾದಸ್ವರಗಳ ಮಧ್ಯೆ ಮಾಂಗಲ್ಯಧಾರಣೆ ನಡೆಯಿತು. ಗುರು-ಹಿರಿಯರು, ಕುಟುಂಬದವರು, ಸ್ನೇಹಿತರು ಸಮ್ಮುಖದಲ್ಲಿ ಈ ಜೋಡಿ ಅಧಿಕೃತವಾಗಿ ಒಂದಾಗಿದೆ. ಮದುವೆ ಸಂಭ್ರಮದಲ್ಲಿ ಟಾಲಿವುಡ್ ಸ್ಟಾರ್ ನಟರು ಸೇರಿದಂತೆ ಎರಡು ಕುಟುಂಬದವರು ಭಾಗಿಯಾಗಿದ್ದರು.  ನಾಗ್ ಮತ್ತು ಸಮಂತಾ ಅವರ ಮದುವೆಯ ಅದ್ಭುತ ಚಿತ್ರಗಳನ್ನ ಸ್ವತಃ ನಟ ನಾಗಾರ್ಜುನ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಳಿ ಶರ್ಟ್ , ಬಿಳಿಪಂಚೆ ಹಾಗೂ ಬಿಳಿ ರೇಷ್ಮೆ ಸೀರೆಯಲ್ಲಿ ಹಣೆಯಲ್ಲಿ ಬಾಸಿಂಗ ಕಟ್ಟಿ ವಧು ವರರಿಬ್ಬರು ಹಸೆಮಣೆ ಏರಿದ್ದಾರೆ. ತೆಲುಗಿನ ಸ್ಟಾರ್ ಜೋಡಿಯ ವಿವಾಹ ಸಮಾರಂಭಕ್ಕೆ ವಿಕ್ಟರಿ ವೆಂಕಟೇಶ್, ಸುರೇಶ್ ಬಾಬು, ರಾಹುಲ್ ರವಿಚಂದ್ರನ್, ವೆನ್ನಿಲ್ಲ ಕಿಶೋರ್, ಸುಶಾಂತ್, ಆದಿಲ್ ಶೇಷ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇಂದು (ಅಕ್ಟೋಬರ್ 7 ಶನಿವಾರ) ಕ್ರೈಸ್ತ ಧರ್ಮದ ಪ್ರಕಾರ ಸ್ಯಾಮ್ ಮತ್ತು ನಾಗ್ ಮದುವೆ ನಡೆಯಲಿದೆ.  ಅಕ್ಟೋಬರ್ 15 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನೆರವೇರಲಿದೆ. ಇಲ್ಲಿ ಅಭಿಮಾನಿಗಳಿಗೆ ಮತ್ತು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡುವ ಸಾಧ್ಯತೆ ಇದೆ. ಈ ಹಾಟ್ ಕಪಲ್ ಹನಿಮೂನ್ ಗಾಗಿ ನ್ಯೂಯಾರ್ಕ್ ಗೆ ತೆರೆಳಲಿದ್ದಾರೆ. ( ವರದಿ: ಪಿ.ಜೆ )     

 

Leave a Reply

comments

Related Articles

error: