ಕರ್ನಾಟಕ

ದಿ. ಲಾಸ್ಟ್ ಲೆಕ್ಟರ್ ಕೃತಿ ಯನ್ನು ಬಣ್ಣಿಸಿದ ಸಾಹಿತಿ ಸುನೀಲ್

ರಾಜ್ಯ(ಚಾಮರಾಜನಗರ)ಅ.7:- ಸಾವಿನ ಬಗ್ಗೆ ಮಾತನಾಡುವುದು ಸುಲಭ, ಸಾವು ಹೀಗೆ ಬರಬಹುದು ಹಾಗೆ ಬರಹುದು ಎಂದು ಕಲ್ಪಿಸಿ ಕೊಳ್ಳುವುದು ಸುಲಭ. ಮುಂದಿನ ಕೆಲವೇ ದಿನಗಳಲ್ಲಿ ತನ್ನ ಬದುಕೇ ಮುಗಿದೇ ಹೋಗಲಿದೆ ಎಂದು ಗೊತ್ತಾದ ಮೇಲೂ ನಗುನಗುತ್ತಲೇ ಬದುಕು ಸುಂದರ ಸಂತೋಷ ದಿಂದ ಇರಿ ಎಂದು ಹೇಳುವುದು ತುಂಬಕಷ್ಟದ ಕೆಲಸ ಅಂತಹ ಕಷ್ಟದಲ್ಲೂ ಕ್ರಿಯಾಶೀಲನಾಗಿ ಬದುಕನ್ನು ಪ್ರೀತಿಸಿದ ವ್ಯಕ್ತಿಯೇ ರ್ಯಾಂಡಿಪಶ್. ಮಾರಣಾಂತಿಕ ಕ್ಯಾನ್ಸರ್‍ಗೆ ತುತ್ತಾಗಿ ಕೆಲವೇ ದಿನಗಳಲ್ಲಿ ಸಾವು ಸಂಭವಿಸುವುದು ತಿಳಿದಿದ್ದರೂ, ಇರುವಷ್ಟು ದಿನ ಗುರಿ ಸಾಧನೆ, ಕುಟುಂಬದೊಂದಿಗೆ ಸಂತೋಷ ದಿಂದ ಕಾಲಕಳೆದ. ಈತನ ಕೊನೆಯ ಉಪನ್ಯಾಸವೇ ದಿ. ಲಾಸ್ಟ್ ಲೆಕ್ಟರ್ ಕೃತಿ ಎಂದು ಯುವ ಸಾಹಿತಿ ಶಿಕ್ಷಕ ಸುನೀಲ್ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ಸಾಪ್ತಾಯಿಕ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ರ್ಯಾಂಡಿಪಶ್ ಅವರ ದಿ.ಲಾಸ್ಟ್ ಲೆಕ್ಟರ್ ಕೃತಿ ಕುರಿತು ಮಾತನಾಡಿ, ಯಾವುದೇ ಕಾಯಿಲೆಗೆ ತುತ್ತಾದ ಅಥವಾ ಖಿನ್ನತೆಗೆ ಒಳಗಾದ ವ್ಯಕ್ತಿಯು ಈ ಕೃತಿಯನ್ನು ಓದಿದಲ್ಲಿ ಬದುಕಲ್ಲಿ ಆಸಕ್ತಿ ಹೊಂದಿ ಜೀವನವನ್ನು ಮತ್ತಷ್ಟು ಪ್ರೀತಿಸಲು ಪ್ರಾರಂಭಿಸುತ್ತಾನೆ ಅಂತಹ ಶಕ್ತಿ ಈ ಕೃತಿಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಮಾತನಾಡಿದ ನಿವೃತ್ತ ಉಪನ್ಯಾಸಕ ಕೃಷ್ಣಸ್ವಾಮಿನಾಯಕ ಅನೇಕ ವೃತ್ತಿಗಳನ್ನು ಮಾಡಿದ ರ್ಯಾಂಡಿಪಶ್ ತನ್ನ ಅಂತಿಮ ದಿನಗಳಲ್ಲಿ ಆಯ್ಕೆ ಮಾಡಿಕೊಂಡಿದ್ದು ಉಪನ್ಯಾಸ ವೃತ್ತಿ. ಅದಕ್ಕೆ ಅಷ್ಟು ಮಹತ್ವವಿದೆ ಎಂದರು.

ಮಹದೇವಸ್ವಾಮಿ, ಶಿವಪ್ರಸಾದ್, ಸ್ವಾಮಿಪೊನ್ನಾಚ್ಚಿ, ಪ್ರಭುಸ್ವಾಮಿ, ನವಮಿ ಬಂಡಿಗೆರೆ, ಕೊತ್ತಲವಾಡಿ ಮಹದೇವಸ್ವಾಮಿ, ಜಿಲ್ಲಾ ಕ.ಸಾ.ಪ ಗೌರವ ವೀರಶೆಟ್ಟಿ, ಚಾ.ಶ್ರೀ.ಜಗದೀಶ್, ಪದ್ಮಾಕ್ಷಿ, ಎಸ್.ಪರಶಿವಮೂರ್ತಿ, ಸುಮ, ಸಿ.ಎಸ್. ಮಂಜುಳ, ಪಿ.ಬಸವಯ್ಯ, ಗುರುಲಿಂಗಮ್ಮ, ರಾಧಗುರುರಾಜ್, ಅರ್ಕಪ್ಪ,ಟಿ.ಬಂಗಾರಗಿರಿನಾಯಕ, ಎಸ್.ನಿರಂಜನಕುಮಾರ್, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: