ಪ್ರಮುಖ ಸುದ್ದಿಮೈಸೂರು

ಎನ್.ಡಿ.ಟಿವಿ ನಿರ್ಬಂಧಕ್ಕೆ ವಿರೋಧ: ಮೈಸೂರು ಪತ್ರಕರ್ತರ ಸಂಘದಿಂದ ಪ್ರತಿಭಟನೆ

ಕೇಂದ್ರ ಸರ್ಕಾರವು ಪ್ರಖ್ಯಾತ ಹಿಂದಿ ಸುದ್ಧಿ ವಾಹಿನಿ “ಎನ್ ಡಿ ಟಿವಿ” ಯನ್ನು ಒಂದು ದಿನಗಳ ಕಾಲ ನಿರ್ಬಂಧಿಸಿದ್ದನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ನೂರಾರು ಪತ್ರಿಕೋದ್ಯಮದ ವಿದ್ಯಾರ್ಥಿಗಳು ಪತ್ರಿಕಾ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಕರಾಳ ದಿನವನ್ನಾಗಿ ಆಚರಿಸಿ  ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಘೋಷಣೆ ಕೂಗಿ ಮನವಿ ಸಲ್ಲಿಸಿದರು.

ಈಚೆಗೆ ಜರುಗಿದ ಪಠಾಣ್ ಕೋಟ್ ವರದಿಯನ್ನು ಎಲ್ಲಾ ಸುದ್ದಿ ವಾಹಿನಿಗಳು ಬಿತ್ತರಿಸಿದ್ದವು ಕೇವಲ ಎನ್ ಡಿ ಟಿವಿಯೇ ರಾಷ್ಟ್ರೀಯ ಭದ್ರತಾ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವುದು ಖಂಡನೀಯವೆಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಕಿಡಿಕಾರಿ ತಕ್ಷಣವೇ ನಿಷೇದಾಜ್ಞೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ದೂರದರ್ಶನ ನಿಯಮವನ್ನು ಮೀರಿ ಹಲವಾರು ಇತರೆ ಸುದ್ದಿವಾಹಿನಿಗಳು ಕಾರ್ಯಕ್ರಮಗಳು ಬಿತ್ತರವಾಗುತ್ತಿವೆಯಾದರು ಅದನ್ನು ಪ್ರಶ್ನಿಸುತ್ತಿಲ್ಲ. ಕೇವಲ ಎನ್ ಡಿ ಟಿವಿಯೊಂದರ ಮೇಲೆ ಗಧಾ ಪ್ರಹಾರ ನಡೆಸಿರುವುದು ಖಂಡನೀಯವಾಗಿದ್ದು ನಿಷೇಧಾಜ್ಞೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಹಿರಿಯ ಪತ್ರಕರ್ತ ಶಿವಕುಮಾರ್ ಮಾತನಾಡಿ ವಾರ್ತಾ ಮತ್ತು ಪ್ರಸಾರ ಇಲಾಖೆಯ ಕಾರ್ಯವೈಖರಿಯೂ ಮಾಧ್ಯಮದ ಮೇಲಿನ ನಡೆಸಿದ ಅಪ್ರಚೋಧಿತ ದಾಳಿಯಾಗಿದೆ ಎಂದು ತಿಳಿಸಿದರು. ಸರ್ಕಾರವು ದೇಶದ್ರೋಹ ಮತ್ತು ಭದ್ರತಾ ಕೃತ್ಯಗಳ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದರು. ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

Leave a Reply

comments

Related Articles

error: