ಸುದ್ದಿ ಸಂಕ್ಷಿಪ್ತ

ಶರಣ ಸಂಗಮ 226 ಮತ್ತು ದತ್ತಿ ಕಾರ್ಯಕ್ರಮ

ಶರಣ ಸಾಹಿತ್ಯ ಪರಿಷತ್ತು, ಚಾಮರಾಜ ಕ್ಷೇತ್ರ ಘಟಕ ಮತ್ತು ಹೆಬ್ಬಾಳು- ವಿಜಯನಗರ ಬಸವ ಸಮಿತಿ ವತಿಯಿಂದ ನ. 6ರಂದು ಬೆಳಗ್ಗೆ 11 ಗಂಟೆಗೆ ವಿಜಯನಗರ 1ನೇಯ ಹಂತದ ಬಸವ ಭವನದಲ್ಲಿ ಶರಣ ಸಂಗಮ 226 ಮತ್ತು ದತ್ತಿ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಶ್ರಾಂತ ಪ್ರಾಧ್ಯಾಪಕರಾಧ ಪ್ರೊ. ಮಲೆಯೂರು ಗುರುಸ್ವಾಮಿ ಅವರು ‘ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ’ ಎಂಬ ವಿಷಯದ ಬಗ್ಗೆ ದತ್ತಿ ಉಪನ್ಯಾಸ ನೀಡಲಿದ್ದಾರೆ. ಹೆಬ್ಬಾಳು-ವಿಜಯನಗರ ಬಸವ ಸಮಿತಿ ಅಧ್ಯಕ್ಷ ಎಚ್‍.ವಿ. ಬಸವರಾಜು ಅಧ್ಯಕ್ಷತೆ ವಹಿಸಲಿದ್ದು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗೊ.ರು. ಪರಮೇಶ್ವರಪ್ಪ ಮುಖ್ಯ ಅತಿಥಿಗಳಾಗಿ ಬಾಗವಹಿಸಲಿದ್ದಾರೆ.

Leave a Reply

comments

Related Articles

error: