ಸುದ್ದಿ ಸಂಕ್ಷಿಪ್ತ

ದೇವಸ್ಥಾನದ ವಾಸ್ತುಶಿಲ್ಪ : ಅ.9ರಿಂದ ರಾಷ್ಟ್ರೀಯ ವಿಚಾರ ಸಂಕಿರಣ

ಮೈಸೂರು,ಅ.7 : ಮೈಸೂರು ವಿವಿಯ ಪುರಾತನ ಇತಿಹಾಸ ಮತ್ತು ಪುರಾತತ್ವ  ವಿಭಾಗವು ಅ.9ರಿಂದ 11ರವರೆಗೆ ದೇವಸ್ಥಾನ ವಾಸ್ತುಶಿಲ್ಪ ಮತ್ತು ಪ್ರತಿಮಾಶಾಸ್ತ್ರ ವಿಷಯವಾಗಿ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸೆಮಿನಾರ್ ಹಾಲ್ ಆಯೋಜಿಸಿದೆ.

ಕುಲಪತಿ ಪ್ರೊ.ದಯಾನಂದ ಮಾನೆ ಉದ್ಘಾಟಿಸುವರು, ಪ್ರಾಸ್ತಾವಿಕವಾಗಿ ಪ್ರೊ.ಎ.ಸುಂದರ್, ಮುಖ್ಯ ಅತಿಥಿಗಳಾಗಿ ಎ.ಹೆಚ್.ಹರಿರಾಮ್ ಶೆಟ್ಟಿ, ಪ್ರೊ.ಬಿ.ನಾಗರಾಜ ಮೂರ್ತಿ ಭಾಗವಹಿಸುವರು, ಹೈದ್ರಾಬಾದ್ ನ ಕೇಂದ್ರೀಯ ವಿಶ್ವವಿದ್ಯಾಲಯ ಪ್ರೊ.ಎಸ್.ನಾಗರಾಜು ಅಧ್ಯಕ್ಷತೆ ವಹಿಸುವರು.

ವಿಚಾರ ಸಂಕಿರಣದಲ್ಲಿ ಖ್ಯಾತ ಇತಿಹಾಸ ತಜ್ಞರು ವಿಷಯ ಮಂಡಿಸುವರು

ಸಮಾರೋಪ : ಡಾ.ವಸುಂದರ ಫೀಲಿಯೋಜ್ಟ್ ಸಮಾರೋಪ ಭಾಷಣ ಮಾಡುವರು, ಮಹಾರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ನಾಗರಾಜಮೂರ್ತಿ ಪಾಲ್ಗೊಳ್ಳುವರು. ಮೈ.ವಿವಿ ಕುಲಸಚಿವೆ ಡಿ.ಭಾರತಿ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: