ಪ್ರಮುಖ ಸುದ್ದಿ

ದಾನಗಳಲ್ಲೇ ಶ್ರೇಷ್ಠವಾದುದು ರಕ್ತದಾನ: ಎಸ್.ಶಂಕರ್

ಪ್ರಮುಖ ಸುದ್ದಿ, ಬನ್ನೂರು, ಅ.೬: ಎಲ್ಲ ದಾನಕ್ಕಿಂತಲೂ ಶ್ರೇಷ್ಠ ದಾನ ರಕ್ತದಾನವಾಗಿದ್ದು, ರಕ್ತವನ್ನು ದಾನ ಮಾಡುವುದರಿಂದ ತುರ್ತು ಅವಶ್ಯಕತೆ ಉಳ್ಳ ರೋಗಿಯ ಜೀವವನ್ನು ರಕ್ಷಣೆ ಮಾಡಿದಂತಾಗುತ್ತದೆ. ರಕ್ತದಾನದಿಂದ ಒಂದು ಉತ್ತಮ ಸಮಾಜ ಸೇವೆಯನ್ನು ಮಾಡಿದ ಸಂತಸ ನಮಗೆ ದೊರಕುತ್ತದೆ ಎಂದು ಹಿರಿಯ ರಾಜಕಾರಣಿ ಎಸ್.ಶಂಕರ್ ತಿಳಿಸಿದರು.
ಪಟ್ಟಣದ ಗಾಣಿಗನಕೊಪ್ಪಲು ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಸೇವಾ ಯೋಜನೆಯ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಉzಶಿಸಿ ಮಾತನಾಡಿದರು. ರಕ್ತದಾನದ ಬಗ್ಗೆ ನಮ್ಮ ಗ್ರಾಮಾಂತರ ಪ್ರದೇಶದಲ್ಲಿ ರಕ್ತದಾನ ಮಾಡುವುದರಿಂದ ವ್ಯಕ್ತಿಯಲ್ಲಿ ರಕ್ತ ಕಡಿಮೆಯಾಗಿ ಆತ ರೋಗಗಳಿಗೆ ತುತ್ತಾಗುತ್ತಾನೆ ಎನ್ನುವ ತಪ್ಪು ಕಲ್ಪನೆ ಜನರಲ್ಲಿದೆ. ಇದನ್ನು ವಿದ್ಯಾವಂತರಾದ ನೀವು ಜನರಿಗೆ ಅರಿವನ್ನು ಮೂಡಿಸುವ ಕೆಲಸ ಮಾಡಬೇಕು ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು. ಆರೋಗ್ಯವಂತ ವ್ಯಕ್ತಿ ಪ್ರತಿ ೩ ತಿಂಗಳಿಗೊಮ್ಮೆ ರಕ್ತವನ್ನು ನೀಡುವುದರಿಂದ ಆತನಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಆತ ಮತ್ತಷ್ಟು ಚೈತನ್ಯದಿಂದ ವರ್ತಿಸಲು ಸಾಧ್ಯವಾಗುತ್ತದೆ. ಜೊತೆಗೆ ರಕ್ತದಾನದಿಂದ ಯಾವುದೇ ರೋಗಗಳು ಬರುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಗೂಳೇಗೌಡ, ಬನ್ನೂರು ಸಮುದಾಯ ಆರೋಗ್ಯ ಕೇಂದ್ರದ ಡಾ.ರವಿಕುಮಾರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಹೊನ್ನಯ್ಯ, ಶಿಬಿರಾಧಿಕಾರಿ ಬಿ.ಎನ್. ನವೀನ್, ನಯನ್‌ಗೌಡ, ಮೇರಿಸಿಂಡ್ರಲಾ, ನಂದಿನಿ, ಆರ್.ಗಿರೀಶ, ರಘುಕುಮಾರ್, ಸುಶೀಲ, ಅತ್ತಹಳ್ಳಿ ದೇವರಾಜು, ಅನಿಲ್, ಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: