ಪ್ರಮುಖ ಸುದ್ದಿ

ಕೊಳೆತ ತರಕಾರಿಗಳಿಂದ ಗಬ್ಬುನಾರುತ್ತಿದೆ ಎಪಿಎಂಸಿ ಮಾರುಕಟ್ಟೆ

ಪ್ರಮುಖ ಸುದ್ದಿ, ಗುಂಡ್ಲುಪೇಟೆ, ಅ.೭: ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ತರಕಾರಿಗಳು ಕೊಳೆತು ನಾರುತ್ತಿದು ಅಶುಚಿತ್ವ ತಾಂಡವವಾಡುತ್ತಿದ್ದರೂ ಇದನ್ನು ತೆರವುಗೊಳಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳಿನಿಂದ ಉತ್ತಮ ಮಳೆಯಾಗುತ್ತಿರುವ ಪರಿಣಾಮವಾಗಿ ರೈತರ ಸಮೃದ್ದವಾಗಿ ಬೆಳೆದು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿವೆ. Pಳೆದ ವಾರದಿಂದ ಬೀಳುತ್ತಿರುವ ಮಳೆಯಿಂದಾಗಿ ಟೊಮೋಟೊ ಸೇರಿದಂತೆ ಹಲವಾರು ತರಕಾರಿಗಳಿಗೆ ಹೆಚ್ಚಿನ ಬೇಡಿಕೆಯಿಲ್ಲದಂತಾಗಿದ್ದು ಖರೀದಿಸುವವರೇ ಇಲ್ಲವಾಗಿದ್ದಾರೆ. ಇದರಿಂದ ಬೆಲೆ ಕುಸಿತವಾಗಿ ಕಾರ್ಮಿಕರ ಕೂಲಿ ಹಾಗೂ ಉತ್ಪಾದನಾ ವೆಚ್ಚವೂ ದೊರಕದ ರೈತರು ತಮ್ಮ ತರಕಾರಿಗಳನ್ನು ಹರಾಜು ಕಟ್ಟೆಗಳಲ್ಲಿಯೇ ಬಿಟ್ಟು ತೆರಳುತ್ತಿದ್ದಾರೆ. ಇವುಗಳಲ್ಲಿ ಚೆನ್ನಾಗಿರುವ ತರಕಾರಿಗಳನ್ನು ಪ್ರತ್ಯೇಕಿಸಿ ಮಾರಾಟ ಮಾಡುವ ವರ್ತಕರು ಉಳಿದ ಹಾಗೂ ಉಪಯೋಗಕ್ಕೆ ಬಾರದ ತರಕಾರಿಗಳನ್ನು ಮಾರುಕಟ್ಟೆಯ ಚರಂಡಿಗಳು ಹಾಗೂ ರಸ್ತೆಯಲ್ಲಿಯೇ ಸುರಿಯುತ್ತಿದ್ದಾರೆ. ಇದರಿಂದ ಯಾವ ಕಡೆ ನೋಡಿದರೂ ಕೊಳೆತ ತರಕಾರಿಗಳ ರಾಶಿಯೇ ಕಣ್ಣಿಗೆ ರಾಚುತ್ತಿದೆ.
ಇಡೀ ಮಾರುಕಟ್ಟೆಯ ತುಂಬಾ ಹೀಗೆ ಕೊಳೆತ ತರಕಾರಿಗಳು ರಾಶಿಯಾಗಿ ಬಿದ್ದಿದು ಕಾಲಿಡಲೂ ಸಾ‘ವಾಗದಂತಾಗಿದೆ. ಅಲ್ಲದೆ ಟೀ ಕುಡಿದ ಪೇಪರ್ ಗ್ಲಾಸ್‌ಗಳನ್ನು ಎಲ್ಲೆಂದರಲ್ಲಿ ಬೀಸಾಡುತ್ತಿದ್ದು ಇನ್ನೂ ಹೆಚ್ಚಿನ ಅಶುಚಿತ್ವಕ್ಕೆ ಕಾರಣವಾಗುತ್ತಿದೆ. ಮಳೆಯ ನೀರು ಚರಂಡಿಗಳಲ್ಲಿ ತುಂಬಿಕೊಂಡು ರಸ್ತೆಯುದ್ದಕ್ಕೂ ಹರಿಯುತ್ತಿದೆ. ಪರಿಣಾಮವಾಗಿ ಇಡೀ ಮಾರುಕಟ್ಟೆಯ ಆವರಣದಲ್ಲಿ ಕೊಳೆತ ತರಕಾರಿಗಳ ಗಬ್ಬುವಾಸನೆ ಹರಡಿಕೊಂಡಿದೆ. ಸಂಬಂ‘ಪಟ್ಟರು ಕೂಡಲೇ ಸಮಸ್ಯೆ ಬಗೆಹರಿಸುವಂತೆ ರೈತರು ಒತ್ತಾಯಿಸಿದ್ದಾರೆ. (ವರದಿ ಬಿ.ಎಂ)

 

Leave a Reply

comments

Related Articles

error: