ಸುದ್ದಿ ಸಂಕ್ಷಿಪ್ತ

ಮೂರು ದಿನಗಳ ರಾಷ್ಟ್ರೀಯ ಕಾರ್ಯಾಗಾರ: ಅ.9 ರಿಂದ 11 ರವರೆಗೆ

ಮೈಸೂರು, ಅ.7: ಮೈಸೂರು ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗ, ಮಾನಸಗಂಗೋತ್ರಿ ಮತ್ತು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗ, ಮಹಾರಾಜ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಅ.9 ರಿಂದ 11 ರವರೆಗೆ ಮಾನಸಗಂಗೋತ್ರಿ ರಸಾಯನಶಾಸ್ತ್ರ ವಿಭಾಗದ ಸೆಮಿನಾರ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ‘ದೇವಾಲಯ ವಾಸ್ತುಶಿಲ್ಪ ಮತ್ತು ಪ್ರತಿಮಾಶಾಸ್ತ್ರ: ಸ್ಥಪತಿಗಳ ದೃಷ್ಟಿಯಲ್ಲಿ’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣವಿದ್ದು, ಮೈಸೂರು ವಿವಿ ಪ್ರಭಾರ ಕುಲಪತಿ ದಯಾನಂದ ಮಾನೆ ಉದ್ಘಾಟಿಸಲಿದ್ದಾರೆ. (ವರದಿ: ಎಲ್.ಜಿ)

Leave a Reply

comments

Related Articles

error: