ಸುದ್ದಿ ಸಂಕ್ಷಿಪ್ತ

ಶೋಭಾ ಕರಂದ್ಲಾಜೆ ಬೇಷರತ್ ಕ್ಷಮೆ ಯಾಚಿಸಲಿ: ಸುಹೇಲ್ ಬೇಗ್

ಆರ್‍ಎಸ್ಎಸ್‍ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದ ಹಿಂದೆ ಸಚಿವ ರೋಷನ್‍ ಬೇಗ್ ಅವರ ಕೈವಾಡ ಇದೆ ಎಂದು ಆರೋಪಿಸಿರುವ ಮಾಜಿ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರ ಹೇಳಿಕೆ ಅತ್ಯಂತ ಬಾಲಿಶತನದಿಂದ ಕೂಡಿದೆ ಎಂದು ನಗರ ಪಾಲಿಕೆ ಸದಸ್ಯ ಸುಹೇಲ್ ಬೇಗ್ ಖಂಡಿಸಿದ್ದಾರೆ.

ರುದ್ರೇಶ್ ಹತ್ಯೆ ಪ್ರಕರಣ ಸಂಬಂಧ ಈಗಾಗಲೇ ತನಿಖೆ ನಡೆದು, ಆರೋಪಿಗಳನ್ನು ಬಂಧಿಸಿದ ತರುವಾಯ ಇದೀಗ ಶೋಭಾ ಅವರು ರೋಷನ್‍ ಬೇಗ್ ಅವರ ವಿರುದ್ಧ ಮಾಡುತ್ತಿರುವ ಆರೋಪ ದುರುದ್ದೇಶ ಪೂರ್ವಕವಾಗಿದೆ. ಮುಸ್ಲಿಂ ಮುಖಂಡರನ್ನು ಹಣಿಯುವ ಕೆಲಸ ಇದಾಗಿದೆ.

ಸಚಿವ ರೋಷನ್ ಬೇಗ್ ಅವರ ವಿರುದ್ಧ ಶೋಭಾ ಅವರು ನೀಡಿರುವ ಹೇಳಿಕೆ ಕುರಿತಂತೆ ಕೂಡಲೇ ಬೇಷರತ್ ಕ್ಷಮೆ ಯಾಚಿಸಬೇಕೆಂದು ಸುಹೇಲ್ ಬೇಗ್ ಆಗ್ರಹಿಸಿದ್ದಾರೆ.

Leave a Reply

comments

Related Articles

error: