ಮನರಂಜನೆ

ಸ್ವರಗಳ ಮಾಲಕಿ ಬೇಗಂ ಅಖ್ತರ್ ಜನ್ಮದಿನದಂದು ಗೂಗಲ್ ನಿಂದ ಡೂಡಲ್

ದೇಶ(ನವದೆಹಲಿ)ಅ.7:- ಮಲ್ಲಿಕಾ ಎ ಗಜಲ್ ಎಂದೇ ಖ್ಯಾತರಾದ, ಸ್ವರಗಳ ಮಾಲಕಿ  ಬೇಗಂ ಅಖ್ತರ್ ಅವರ 103ನೇ ಜನ್ಮದಿನವನ್ನು ಗಜಲ್  ಪ್ರೇಮಿಗಳು ಆಚರಿಸಿದರು. ಗೂಗಲ್ ಕೂಡ ಅವರ ಜನ್ಮದಿನ ಪ್ರಯುಕ್ತ ಡೂಡಲ್ ರಚಿಸಿದ್ದು, ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದೆ.

ಬೇಗಮ್ ಅಖ್ತರ್ ಜನ್ಮ 7ಅಕ್ಟೋಬರ್ 1914ರಲ್ಲಿ ಉತ್ತರಪ್ರದೇಶದ ಫೈಜಾಬಾದ್ ಜನ್ಮತಾಳಿದರು. ಡೂಡಲ್ ನಲ್ಲಿ ಗಾಯಕಿ ಸಿತಾರ್ ನ್ನು ಹಿಡಿದುಕೊಂಡಿರುವ ಚಿತ್ರ ರಚಿಸಲಾಗಿದೆ. ಈಗಲೂ ಕೂಡ ಲಕ್ನೋದಲ್ಲಿ ಸಂಗೀತ ಕಾರ್ಯಕ್ರಮಗಳು ನಡೆದಾಗ ಸ್ವರಗಳ ಮಾಲಕಿ ಬೇಗಂ ಅಖ್ತರ್ ಅವರನ್ನು ಸ್ಮರಿಸಲು ಮರೆಯುವುದಿಲ್ಲ.  ಅವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು. ಮರಣೋತ್ತರವಾಗಿ ಅವರಿಗೆ ಮದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ನಸೀಬ್ ಕಾ ಚಕ್ಕರ್, ದಿ ಮ್ಯೂಸಿಕ್ ರೂಮ್, ರೋಟಿ, ದಾನಾ ಪಾನಿ, ಎಹಸಾನ್ ಸೇರಿದಂತೆ ಹಲವು ಚಿತ್ರಗಳಿಗೆ ತಮ್ಮ ಸುಶ್ರಾವ್ಯ ಕಂಠದಿಂದ ಸಂಗೀತ ಸುಧೆಯನ್ನು ಹರಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: