ಕರ್ನಾಟಕ

ಕೇಂದ್ರದ ದುಡ್ಡು ಸಿದ್ದರಾಮಯ್ಯನವರ ಜಾತ್ರೆ: ಸಂಸದ ಪ್ರತಾಪ್ ಸಿಂಹ ಲೇವಡಿ

ಚೆಟ್ಟಳ್ಳಿ, ಅ.7: ಯಾರದೋ ದುಡ್ಡುಎಲ್ಲಮ್ಮನ ಜಾತ್ರೆ ಎಂಬಂತೆ ಕೇಂದ್ರ ಸರಕಾರವು ಬಡವರಿಗೆಅಕ್ಕಿ,ಉಪ್ಪು ಬೆಳೆಯನ್ನು ಕಡಿಮೆ ದರದಲ್ಲಿರಾಜ್ಯ ಸರಕಾರಕ್ಕೆ ನೀಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದರಲ್ಲಿ ಕೇವಲ 2ರೂ. ಕಡಿಮೆ ಮಾಡಿ ತಮ್ಮ ಫೋಟೊವನ್ನು ಹಾಕಿಸಿ ನ್ಯಾಯಬೆಲೆ ಅಂಗಡಿಗಳಲೆಲ್ಲ ಇವರ ಸಾಧನೆ ಕಾಣುತಿವೆ. ಕೇಂದ್ರದ ದುಡ್ಡು ಸಿದ್ದರಾಮಯ್ಯನವರ ಜಾತ್ರೆ ಮಾಡುತಿದ್ದಾರೆಂದು ಶುಕ್ರವಾರ ಚೆಟ್ಟಳ್ಳಿ  ನರೇಂದ್ರ ಮೋದಿ ಸಹಕಾರ ಭವನದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಪಂಚಾಯಿತಿ ಮಟ್ಟದ ಸಭೆಯಲ್ಲಿ ಲೋಕ ಸಭಾ ಸದಸ್ಯ ಪ್ರತಾಪಸಿಂಹ ಕಾಂಗ್ರೇಸ್ ಪಕ್ಷದಕಾರ್ಯವೈಕರಿಯ ಬಗ್ಗೆ ಲೇವಡಿ ಮಾಡಿದರು.

ಕೊಡಗಿನಲ್ಲಿ ಶಾಸಕರುಗಳಾದ ಕೆ.ಜಿ.ಬೋಪಯ್ಯ ಹಾಗು ಅಪ್ಪಚ್ಚು ರಂಜನ್ ರವರು ರಸ್ತೆ, ನೀರಿನ ವ್ಯವಸ್ಥೆ, ದೇವಾಲಯಕ್ಕೆಅನುದಾನ, ಮೆಡಿಕಲ್ ಹಾಗೂ ಇಂಜಿನಿಯರಿಂಗ್‍ ಕಾಲೇಜು ಸ್ಥಾಪನೆ, ಗೌಡ ಅಕಾಡೆಮಿ, ಕೊಡವರ ಹಾಕಿ ಹಬ್ಬಕ್ಕೆಅನುದಾನಲ್ಲೆ ಶ್ರಮಿಸಿರುವುದರಿಂದ ಎಲ್ಲರಿಗೂಅವರ ಪರಿಚಯವಿದೆ. ಎಲ್ಲರ ನೀರೀಕ್ಷೆಯ ಉತ್ತಪ್ರದೇಶದ ಚುನಾವಣೆಯಲ್ಲಿ ಬಿಜೆಪಿಯ ಬಾರಿ ಗೆಲುವು ಸಾಧನೆಯಾಗಿದೆ. ಹೊಗೆಯಲ್ಲಿ ಬೇಯುತ್ತಿದ್ದ  6 ಕೋಟಿ ತಾಯಂದಿರಿಗೆ ಕೇಂದ್ರದ ಉಜ್ವಲ ಯೋಜನೆಯಡಿ ಉಚಿತಗ್ಯಾಸ್ ಸಂಪರ್ಕವನ್ನು ನೀಡಿದೆ. ಸಾಮಾನ್ಯರಿಗೆಲ್ಲ ವೈದಕೀಯ ಸಲಕರಣೆಗಳು ಕಡಿಮೆ ಬೆಲೆಯಲ್ಲಿದೊರಕುವಂತೆ ಮಾಡಿದೆ.ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಮಾಡುತ್ತಾ ಬರುತಿದ್ದರೂ ಪ್ರಧಾನಿ ಮೋದಿಯವರ ಹೆಸರನ್ನುಕೆಡಿಸಲು ಹುನ್ನಾರ ಮಾಡುತಿದ್ದಾರೆಂದರು. 36 ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದು 8 ಎಂಎಲ್‍ಎ ಕ್ಷೇತ್ರದ ಜವಾಬ್ದಾರಿ ಇದ್ದು ಕಾರ್ಯಕರ್ತರಿಗೆ ಸದಾ ಸಹಕರ ನೀಡಲು ಸಿದ್ದನಿದ್ದೇನೆಂದರು.5ಲಕ್ಷದ ವರೆಗಿನಅನುದಾನ ನೀಡುವ ಭರವಸೆಯನ್ನು ನೀಡಿದರು.

ಚೆಟ್ಟಳ್ಳಿ ಸ್ಥಾನೀಯ ಸಮಿತಿಅಧ್ಯಕ್ಷ ಬಲ್ಲಾರಂಡಕಂಠಿಕಾರ್ಯಪ್ಪಲೋಕಸಭಾ ಸದಸ್ಯ ಪ್ರತಾಪಸಿಂಹರವರಿಗೆ ಶಾಲುಹೊದಿಸಿ ಹಣ್ಣು ಹಂಪಲನ್ನು ನೀಡಿದರೆ ಬಲ್ಲಾರಂಡ ಮಣಿಉತ್ತಪ್ಪನವರುತ್ರಿಶೂಲವನ್ನು ನೀಡಿ ಗೌರವಿಸಿದರು.  ಬಿಜೆಪಿ ಸರಕಾರ ಇದ್ದಾಗ ಬಿಡುಗಡೆಯಾಗುತಿದ್ದ ಹಣ ಕಾಂಗ್ರೇಸ್ ಆಡಳಿತದಲ್ಲಿ ಆಗಲೇ ಇಲ್ಲ. ಬಿಜೆಪಿ ಸರಕಾರಸಾಲಮಾಡಿದೆಂದುದೂರುತಿತ್ತುಆದರೆಕೋಟಿಗಟ್ಟಲೆಸಾಲ ಮಾಡಿರುವಕಾಂಗ್ರೆಸ್ ಸರಕಾರ ಅಭಿವೃದ್ದಿಯಾಮಾಡಲೇ ಇಲ್ಲ.ಡಿವೈಎಸ್ಪಿ ಗಣಪತಿಯವರಆತ್ಮಹತ್ಯೆಯಲ್ಲಿಜಾರ್ಜ್‍ರವರ ಕೈವಾಡವಿದ್ದರೂ ಕಾನುನು ಕ್ರಮಕೈಗೊಳ್ಳುವಲ್ಲಿ ಸೋತಿತು, ಜಾರ್ಜ್‍ರವರುಕಾಂಗ್ರೆಸ್ ಸರಕಾರದಎಟಿಯಂ ಇದ್ದಂತೆ,ಮುಖ್ಯಮತ್ರಿಗಳು ಡಿನೋಟಿಫೈ ಮಾಡಿದ್ದಾರೆಂದರು. ಪ್ರಧಾನಿ ಮೋದಿಯವರ ಮನ್ನ್ ಕಿ ಬಾತ್‍ಆದರೆ ಕಾಂಗೇಸಿನ ಕಾಮ್ ಕಿ ಬಾತ್‍ಎಂದರು.ಕೇಂದ್ರದ ಸಾಧನೆ ಹಾಗು ರಾಜ್ಯಸರಕಾರದ ದುರಾಡಳಿತವನ್ನು ಮನೆಮನೆಗೆ ತುಪಿಸುವ ಕೆಲಸವಾಗಬೇಕು, ಇದಕ್ಕಾಗಿ ಮುಂದಿನ ದಿನಗಳಲ್ಲಿ ಬೈಕ್‍ರ್ಯಾಲಿ ಹಮ್ಮಿಕೊಳ್ಳಲಾಗಿದೆಂದು ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ ಹೇಳಿದರು.

ವೇದಿಕೆಯಲ್ಲಿ ಬಿಜೆಪಿ ಸ್ಥಾನಿಯ ಸಮಿತಿ ಅಧ್ಯಕ್ಷ ಬಲ್ಲಾರಂಡಕಂಠಿಕಾರ್ಯಪ್ಪ, ಜಿಲ್ಲಾಪಂಚಾಯಿತಿಅಧ್ಯಕ್ಷ ಬಿ.ಎ.ಹರೀಶ್, ಚೆಟ್ಟಳ್ಳಿ ಸಹಕಾರ ಸಂಘದಉಪಾಧ್ಯಕ್ಷ ಹೆಚ್.ಎಸ್.ತಿಮ್ಮಪ್ಪಯ್ಯ, ತಾಲೂಕುಅಧ್ಯಕ್ಷಕಿಶೋರ್‍ಕುಮಾರ್,ಮಡಿಕೇರಿತಾಲೂಕು ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ,ಜಿಲ್ಲಾಯುವ ಮೋರ್ಚದಅಧ್ಯಕ್ಷ ಕಾಳನ ರವಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಶಾಲಪ್ಪ, ಮಡಿಕೇರಿತಾಲೂಕು ಪ್ರಭಾರಚುನಾವಣಾ ಉಸ್ತುವಾರಿಗಳಾದ ಜಪ್ಪುಅಚ್ಚಪ್ಪ,ಜಿಲ್ಲಾಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ, ಮಡಿಕೇರಿತಾಲೂಕು ಪ್ರಧಾನ ಕಾರ್ಯದರ್ಶಿ ಮುದ್ದಂಡಡಿನ್ನ್ ಬೋಪಣ್ಣ ಹಾಜರಿದ್ದರು.ಬಿಜೆಪಿ ಸ್ಥಾನಿಯ ಸಮಿತಿಅಧ್ಯಕ್ಷ ಬಲ್ಲಾರಂಡಕಂಠಿಕಾರ್ಯಪ್ಪ ಸ್ವಾಗತಿಸಿ,ನಿರೂಪಿಸಿ ವಂದಿಸಿದರು.

ಮಡಿಕೇರಿಗೌಡ ಸಮಾಜದಅಧ್ಯಕ್ಷ ಪೇರಿನಜಯಾನಂದ, ಪಕ್ಷದಕಾರ್ಯಕರ್ತರು,ಚೆಟ್ಟಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರುಗಳು,ಗ್ರಾಮಪಂಚಾಯಿತಿಗೆ ಆಯ್ಕೆಯಾದ ಬಿಜೆಪಿ ಸದಸ್ಯರು ಹಾಗು ಸಾರ್ವನಿಕರು ಹಾಜರಿದ್ದರು.ಶಾಸಕರಿಗೆ ಮನವಿಪತ್ರವನ್ನು ಸಲ್ಲಿಸಿದರು. (ವರದಿ: ಕೆಸಿಐ, ಎಲ್.ಜಿ)

 

Leave a Reply

comments

Related Articles

error: