ಪ್ರಮುಖ ಸುದ್ದಿ

ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ೧೮ ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ: ಪ್ರತಾಪಸಿಂಹ

ಪ್ರಮುಖ ಸುದ್ದಿ, ಹುಣಸೂರು, ಅ.೭: ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ೧೮ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡುವಲ್ಲಿ ಸಫಲವಾಗಿದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
ನಗರದಲ್ಲಿ ೬.೨೩ ಕೋಟಿ ವೆಚ್ಚದಲ್ಲಿ ಸಮಗ್ರ ವಿದ್ಯುತ್ ಜಾಲ ಅಭಿವೃದ್ಧಿ ಯೋಜನಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ವಿದ್ಯುತ್ ಹಾಗೂ ಆರೋಗ್ಯ ಕ್ಷೇತ್ರ ಸೇರಿದಂತೆ ದೇಶದ ವಿವಿಧ ಕ್ಷೇತ್ರಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭೂತಪೂರ್ವ ಸಾಧನೆ ಮಾಡುತ್ತಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಹೃದಯ ಸಂಬಂಧಿ ಕಾಯಿಲೆ, ಮಂಡಿ ಚಿಪ್ಪು ಜೋಡಣೆ ಸೇರಿದಂತೆ ಔಷಧಿ ಅಂಗಡಿ ತೆರೆಯುವ ವಿಚಾರದಲ್ಲಿ ಈ ಹಿಂದೆ ಯಾವುದೇ ಸರ್ಕಾರ ತೆಗೆದುಕೊಳ್ಳದ ನಿರ್ಧಾರ ತೆಗೆದುಕೊಂಡು ಜನಸಾಮಾನ್ಯರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗಿದೆ ಎಂದರು.
ದೀನ್ ದಯಾಳ ಉಪಾಧ್ಯಾಯ ಗ್ರಾಮೀಣ ವಿದ್ಯುತ್ ಸಂಪರ್ಕ ಯೋಜನೆಯಲ್ಲಿ ತಾಲೂಕಿಗೆ ೯.೯೩ ಕೋಟಿ ಅನುದಾನ ನೀಡಲಾಗಿದೆ. ಕೇಂದ್ರ ಸರ್ಕಾರದ ಸೌಭಾಗ್ಯ ಯೋಜನೆ ಅಡಿಯಲ್ಲಿ ೫ ಕೋಟಿ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಲಾಗಿದೆ ಎಂದರು.
ಮೈಸೂರು ಜಿಲ್ಲೆಯಲ್ಲಿ ಸುಧಾರಿತ ವಿದ್ಯುತ್ ವಿತರಣೆಗೆ ೫೦.೫೭ ಕೋಟಿ ಅನುದಾನ ೯ ತಾಲೂಕುಗಳಿಗೆ ಕೇಂದ್ರ ಸರ್ಕಾರದಿಂದ ತರಲಾಗಿದೆ. ಈ ಯೋಜನೆಯಲ್ಲಿ ಹುಣಸೂರು ನಗರದ ಸಂಪೂರ್ಣ ವಿದ್ಯುತ್ ಜಾಲ ಉತ್ತಮಪಡಿಸಲು ೬.೨೩ ಕೋಟಿ ನೀಡಲಾಗಿದ್ದು, ಮೈಸೂರು ೧೦.೮೮ ಕೋಟಿ, ನಂಜನಗೂಡು ೬.೩೫, ಟಿ.ನರಸಿಪುರ ೫.೬೬, ಬನ್ನೂರು ೪.೫೧, ಪಿರಿಯಾಪಟ್ಟಣ ೬.೯೪, ಎಚ್.ಡಿ.ಕೋಟೆ ೧.೯೬, ಸರಗೂರು ೨.೦೯ ಮತ್ತು ಕೆ.ಆರ್.ನಗರ ೫.೯೨ ಕೋಟಿ ಅನುದಾನ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಮಂಜುನಾಥ್, ಉಪವಿಭಾಗದ ಇ.ಇ ನಾಗೇಶ್, ನಗರಸಭಾಧ್ಯಕ್ಷ ಲಕ್ಷ್ಮಣ್, ತಾ.ಪಂ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: