ಕರ್ನಾಟಕ

ಪುಷ್ಕರಕ್ಕೆ ಅನುಮತಿ ನೀಡಿದವರು ಯಾರು? : ಕೆ.ಜಿ.ಬೋಪಯ್ಯ ಅಸಮಾಧಾನ

ಮಡಿಕೇರಿ ಅ.8 : ಇತ್ತೀಚೆಗೆ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಪುಷ್ಕರ ಪೂಜಾ ಹೆಸರಿನಲ್ಲಿ ತಲಕಾವೇರಿ-ಭಾಗಮಂಡಲ ಪವಿತ್ರ ಕ್ಷೇತ್ರಕ್ಕೆ ಧಕ್ಕೆ ಉಂಟು ಮಾಡಿದ್ದಾರೆ. ತೀರ್ಥ ಕುಂಡಿಕೆಯ ಕೊಳದಲ್ಲಿ ತಲೆಗೆ ಅಕ್ಕಿ ಮತ್ತು ಕುಂಕುಮ ಬಳಿದುಕೊಂಡು ಸ್ನಾನ ಮಾಡಿ ಅಪವಿತ್ರಗೊಳಿಸಿದ್ದಾರೆ. ಪುಷ್ಕರಕ್ಕೆ ಅನುಮತಿ ನೀಡಿದವರು ಯಾರೂ ಎಂದು ಕೆ.ಜಿ.ಬೋಪಯ್ಯ, ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಅವರು ಅತೃಪ್ತಿ ವ್ಯಕ್ತಪಡಿಡಿದರು.

ಕುಂಡಿಕೆಯ ಕೊಳದಲ್ಲಿ ಅಕ್ಕಿ, ಕುಂಕುಮ ಹಾಕಿಕೊಂಡು ಸ್ನಾನ ಮಾಡಿದ್ದಾರೆ. ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪುಷ್ಕರಕ್ಕೆ ಆಗಮಿಸುವಾಗ ತಮಗೆ ತಿಳಿದಿರಲಿಲ್ಲವೇ ಎಂದು ಪ್ರಶ್ನಿಸಿದ ಕೆ.ಜಿ.ಬೋಪಯ್ಯ ಅವರು ಪುಷ್ಕರ ಹೆಸರಿನಲ್ಲಿ ಕೊಡಗಿನ ಜನರ ಭಾವನೆಗೆ ಧಕ್ಕೆ ತರಲಾಗಿದೆ. ಈ ಸಂಬಂಧ ತನಿಖೆ ಮಾಡುವಂತೆ ಜಿಲ್ಲಾಧಿಕಾರಿ ಅವರಿಗೆ ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ ಅವರು ಮಾತನಾಡಿ ಕೊಡಗಿನ ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಂಡದರೆ ಸಹಿಸಲು ಸಾಧ್ಯವಿಲ್ಲ. ಯಾರೇ ಆದರೂ ಸ್ಥಳೀಯ ಭಾವನೆಗಳಿಗೆ, ಸಂಪ್ರದಾಯಗಳಿಗೆ ಬೆಲೆ ನೀಡಬೇಕು ಎಂದು ಅವರು ಹೇಳಿದರು.
ಈ ಸಂಬಂಧ ವೀಣಾ ಅಚ್ಚಯ್ಯ ಅವರು ಮಾತನಾಡಿ ಆಂದ್ರಪ್ರದೇಶದಿಂದ ಪುಷ್ಕರಕ್ಕೆ ಆಗಮಿಸಿದವರು ತಲಕಾವೇರಿ ಭಾಗಮಂಡಲದಲ್ಲಿ ಕೊಡಗಿನ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಬಗ್ಗೆ ಮಾತನಾಡಿದ ಬಿ.ಎಸ್.ತಮ್ಮಯ್ಯ ಅವರು ಪುಷ್ಕರ ಸಂದರ್ಭದಲ್ಲಿ ಇಲ್ಲಿರುವ ಸ್ಥಳೀಯ ಅರ್ಚಕರನ್ನು ಬಿಟ್ಟು ಹೊರಗಿನಿಂದ ಬಂದವರು ಪೂಜೆ ಮಾಡಲು ಅವಕಾಶ ನೀಡಿದವರು ಯಾರೂ ಎಂದು ಅವರು ಹೇಳಿದರು.  ಈ ಸಂಬಂಧ ಮಾಹಿತಿ ನೀಡಿದ ತಲಕಾವೇರಿ-ಭಾಗಮಂಡಲ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್ ಅವರು ಪಿಂಡ ಪ್ರಧಾನ ಮಾಡಲು ಬಂದಿದ್ದರು, ಆದರೆ ದೇವಾಲಯದಲ್ಲಿ ಪೂಜೆ ಮಾಡಿಲ್ಲ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರಾದ ಎಂ.ಬಿ.ದೇವಯ್ಯ ಅವರು ಈಗಾಗಲೇ ತಲಕಾವೇರಿ-ಭಾಗಮಂಡಲ ಪಾವಿತ್ರ್ಯಕ್ಕೆ ಧಕ್ಕೆ ಉಂಟುಮಾಡಿದ್ದಾರೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಪೂಜಾ ಕಾರ್ಯಗಳನ್ನು ಕೈಗೊಳ್ಳಬೇಕಿದೆ ಎಂದು ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಅಲ್ಲಿನ ಪ್ರಮುಖ ಅರ್ಚಕರೊಬ್ಬರು ಅಕ್ಟೋಬರ್, 17 ರೊಳಗೆ ಕಳಸ ಅಭಿಷೇಕ ಪೂಜಾ ಕಾರ್ಯವನ್ನು ಕೈಗೊಂಡು ದೇವರಲ್ಲಿ ಪ್ರಾರ್ಥಿಸಿಕೊಳ್ಳಬೇಕಿದೆ ಎಂದು ಅವರು ಸಲಹೆ ಮಾಡಿದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: