
ಮೈಸೂರು
ಗಾಂಧೀ ಪ್ರತಿಮೆಯ ಮೇಲಿದ್ದ ಕೊಳೆ ತೆಗೆದ ಕರ್ನಾಟಕ ಕಾವಲುಪಡೆ
ಮೈಸೂರು,ಅ.8:- ನಗರದ ಕೋರ್ಟ್ ಮುಂಭಾಗದ ಗಾಂಧಿ ಪ್ರತಿಮೆಗೆ ಕಳೆದ ಒಂದು ವಾರದಿಂದ ಹಾಕಿದ್ದ ಹೂವಿನ ಹಾರಗಳು ಕೊಳತಿದ್ದವು.ಅವುಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು.
ಭಾನುವಾರ ಕರ್ನಾಟಕ ಕಾವಲು ಪಡೆಯ ಕಾರ್ಯಕರ್ತರು ನೀರಿನ ಟ್ಯಾಂಕರ್ ತರಿಸಿ ಪ್ರತಿಮೆಗೆ ನೀರನ್ನು ಹಾಕುವ ಮೂಲಕ ಸ್ವಚ್ಛಗೊಳಿಸುವ ಕಾರ್ಯವನ್ನು ನಡೆಸಿದರು. (ಹೆಚ್.ಎನ್)