ಮೈಸೂರು

ಎಸ್ ಡಿ ಎಂ ಐ ಎಂ ಡಿ ಸಂಸ್ಥೆಯ ಉದ್ಯಾನವನಕ್ಕೆ ಅತ್ಯುತ್ತಮ ಅಲಂಕಾರಿಕ ಉದ್ಯಾನವನ ಪ್ರಶಸ್ತಿ 

ಮೈಸೂರು,ಅ.8:- ಸುಂದರ ಆವರಣ ಹಾಗೂ ಹಸಿರು ವಾತಾವರಣ ಹೊಂದಿರುವ ಹೆಗ್ಗಳಿಕೆಯನ್ನು ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲೆಪ್ಮೆಂಟ್ (ಎಸ್ ಡಿ ಎಂ ಐ ಎಂ ಡಿ) ಸಂಸ್ಥೆಯು ಹೊಂದಿದ್ದು, ಅಲ್ಲಿನ ತೋಟಗಾರಿಕೆಯ ದೃಶ್ಯ, ಅಲಂಕಾರಿಕ ಗಿಡಗಳು ಹಾಗೂ ಫಲಗಳ ತೋಟವು ‘ಅತ್ಯುತ್ತಮ ಅಲಂಕಾರಿಕ ಉದ್ಯಾನವನ ಪ್ರಶಸ್ತಿ’ ಯನ್ನು ಶಿಕ್ಷಣ ಸಂಸ್ಥೆಗಳ ಗುಂಪಿನಲ್ಲಿ ಎಸ್ ಡಿ ಎಂ ಐ ಎಂ ಡಿ ಸಂಸ್ಥೆಗೆ ದೊರಕಿಸಿಕೊಟ್ಟಿದೆ.

ಜಿಲ್ಲೆಯ ತೋಟಗಾರಿಕೆದಾರರ ಸಂಘದ ಸಹಯೋಗದೊಂದಿಗೆ ತೋಟಗಾರಿಕೆ ವಿಭಾಗ, ಮೈಸೂರು ಜಿಲ್ಲಾ ಪಂಚಾಯತ್ ನವರು  ದಸರಾ ಫಲ ಪುಷ್ಪ ಸ್ಪರ್ಧೆ 2017 ನ್ನು ಆಯೋಜಿಸಿದ್ದರು. ಎಸ್ ಡಿ ಎಂ ಐ ಎಂ ಡಿ ಸಂಸ್ಥೆಯ ಉದ್ಯಾನವನವು ಅಲ್ಲಿಗೆ ಬರುವವರಿಂದ ಅಪಾರ ಮೆಚ್ಚುಗೆ ಗಳಿಸಿದ್ದು, ಸತತವಾಗಿ ಏಳು ವರ್ಷಗಳಿಂದ ದಸರಾ ಫಲ ಪುಷ್ಪ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಗಳಿಸುತ್ತಾ ಬಂದಿದೆ.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: