ಮೈಸೂರು

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜೀವನಚರಿತ್ರೆಯನ್ನು ಅಳವಡಿಸಿಕೊಳ್ಳಿ: ಪ್ರೊ.ಸಿ.ಕೆ.ಎನ್. ರಾಜ

ಸ್ಟೇಟ್‍ ಬ್ಯಾಂಕ್ ಆಫ್ ಮೈಸೂರಿನ ಮೈಸೂರು ನೆಟ್‍ವರ್ಕ್‍ ವತಿಯಿಂದ ನಗರದ ಶಾರದಾವಿಲಾಸ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಇತ್ತೀಚಿಗೆ ಜಾಗೃತಿ ಅರಿವು ಕಾರ್ಯಕ್ರಮ ಸಪ್ತಾಹ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಬರಹಗಾರ ಹಾಗೂ ಕಾನೂನು ತಜ್ಞರಾದ ಪ್ರೊಫೆಸರ್ ಸಿ.ಕೆ.ಎನ್. ರಾಜ ಅವರು ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಜಾಗೃತಿ ಅರಿವಿನ ಮಹತ್ವದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಭಾರತದ ಉಕ್ಕಿನ ಮನುಷ್ಯ ಧೀಮಂತ ಸ್ವಾತಂತ್ರ್ಯ ಹೋರಾಟಗಾರರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜೀವನಚರಿತ್ರೆಯನ್ನು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿಕೊಂಡು ಹೇಗೆ ಜಾಗೃತರಾಗಿರಬೇಕೆಂಬುದನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಟೇಟ್‍ ಬ್ಯಾಂಕ್‍ ಆಫ್‍ ಮೈಸೂರು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್‍. ವೆಂಕಟೇಶ್ವರುಲು ವೃತ್ತಿ ಮತ್ತು ಸಾರ್ವಜನಿಕ ಜೀವನದಲ್ಲಿ ಜಾಗೃತಿಯ ಅರಿವಿನ ಬಗ್ಗೆ ತಿಳುವಳಿಕೆಯನ್ನು ನೀಡಿದರು. ಬದುಕಿನಲ್ಲಿ ಜಾಗೃತಿ ಅರಿವಿನ ಮಹತ್ವದ ಬಗ್ಗೆ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕರಾದ ಶ್ರೀನಿವಾಸ ಕಾಸಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ ಪೈ ಮತ್ತು ದಯಾನಂದ್, ಬ್ಯಾಂಕಿನ ನಿರ್ದೇಶಕರಾದ ರಾಘವೇಂದ್ರ, ಮಾರ್ಗದರ್ಶಿ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾದ ಶಿವಲಿಂಗಯ್ಯ, ಅಧಿಕಾರಿ ವರ್ಗದ ವಲಯ ಕಾರ್ಯದರ್ಶಿಗಳಾದ ಶ್ರೀರಾಮ್ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: