ಕರ್ನಾಟಕ

ಕುರಿಗಳ ನಿಗೂಢ ಸಾವು

ರಾಜ್ಯ( ಮಂಡ್ಯ)ಅ.9:- ಕುರಿಗಳು ನಿಗೂಢವಾಗಿ  ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅಣ್ಣೂರು ಗ್ರಾಮದಲ್ಲಿ ನಡೆದಿದೆ.

ಮೂರು ದಿನಗಳಿಂದ ಇಪ್ಪತೈದಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ತಾಯಮ್ಮ, ದೊಡ್ಡತಮ್ಮಯ್ಯ, ಮಹದೇವು, ಕರಿಚೌಡಯ್ಯ, ಪುಟ್ಟಮಾದು ಎಂಬುವರಿಗೆ ಸೇರಿದ ಕುರಿಗಳು ಸಾವನ್ನಪ್ಪಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.  ಕುರಿಗಳ ಸಾವಿನಿಂದ ರೈತರು ಕಂಗಾಲಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: