ಮನರಂಜನೆಲೈಫ್ & ಸ್ಟೈಲ್

ಬರೋಬ್ಬರಿ 35 ಕೆ.ಜಿ. ತೂಕವನ್ನು ಇಳಿಸಿಕೊಂಡ ಬುಲೆಟ್

ಬೆಂಗಳೂರು,ಅ.09: ಹಾಸ್ಯ ನಟ ಬುಲೆಟ್ ಪ್ರಕಾಶ್ ಬರೋಬ್ಬರಿ 35 ಕೆ.ಜಿ. ತೂಕವನ್ನು ಇಳಿಸಿಕೊಂಡಿದ್ದಾರೆ. ಮುಂದೆ ಇನ್ನೂ ತೂಕ ಇಳಿಸಿಕೊಳ್ಳುತ್ತೇನೆ  ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಬುಲೆಟ್ ಪ್ರಕಾಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಾಗುತ್ತಾ ಇರುತ್ತಾರೆ. ಹಾಗೆಯೇ ಈ ಬಾರಿ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದರ ಮೂಲಕ ಸುದ್ದಿಯಾಗಿದ್ದಾರೆ. ಶನಿವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಎರಡು ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. ಈ ಹಿಂದೆ ಖಾಸಗಿ ಚಾನೆಲ್ ನಲ್ಲಿ ಬುಲೆಟ್ ಪ್ರಕಾಶ್ ಭಾಗಿಯಾಗಿದ್ದಾಗ ನಾನು ಸಿಕ್ಸ್ ಪ್ಯಾಕ್ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದರು. ಅದರ ಪ್ರತಿಫಲವಾಗಿ “ಎಲ್ಲರಿಗೂ ನಮಸ್ಕಾರ ನಾನು ಸುಮಾರು 35 ಕೆಜಿ ತೂಕ ಕಡಿಮೆ ಮಾಡಿದ್ದಿನಿ,ಇನ್ನೂ ಕಡಿಮೆ ಮಾಡುತ್ತಿನಿ, ನಿಮಗೆ ನನ್ನಲ್ಲಿ ಬದಲಾವಣೆ ಕಾಣುತ್ತಿದೆಯ” ಎಂಬ ಶೀರ್ಷಿಕೆಯ ಮೂಲಕ ಟ್ವೀಟ್ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ. ( ವರದಿ: ಪಿ.ಜೆ )

Leave a Reply

comments

Related Articles

error: