ಮನರಂಜನೆ

ಬಿಗ್ ಬಿ ಅಮಿತಾಬ್ ಬಚ್ಚನ್ ಜನ್ಮ ದಿನ ಆಚರಿಸಿಕೊಳ್ಳುವುದಿಲ್ಲವಂತೆ..!?

ದೇಶ(ನವದೆಹಲಿ)ಅ.9:- ಬರುವ ಅಕ್ಟೋಬರ್ 11ರಂದು ಬಾಲಿವುಡ್ ನ ಹಿರಿಯ ನಟ, ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಜನ್ಮದಿನ . ಅವರ ಅಭಿಮಾನಿಗಳು ಜನ್ಮದಿನಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಆದರೆ ಈಬಾರಿ ಅಮಿತಾಬ್ ಬಚ್ಚನ್ ಜನ್ಮದಿವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರಂತೆ.

ಅಕ್ಟೋಬರ್ 11ಕ್ಕೆ 75ನೇ ವಸಂತಕ್ಕೆ ಕಾಲಿರಿಸಲಿರುವ ಬಿಗ್ ಬಿ  ಈ ಕುರಿತು ಟ್ವೀಟ್ ಮಾಡಿ ಈ ಬಾರಿ ಜನ್ಮ ದಿನವನ್ನು ಮನೆಯಲ್ಲಿಯೇ ಸಿಂಪಲ್ ಆಗಿ ಆಚರಿಸಲಿದ್ದೇನೆ. ದೀಪಾವಳಿಯನ್ನು ಕೂಡ ಸಿಂಪಲ್ ಆಗಿಯೇ ಆಚರಿಸಲಾಗುವುದು ಎಂದಿದ್ದಾರೆ. ಆದರೆ ಇದಕ್ಕೆ ಕಾರಣ ಮಾತ್ರ ತಿಳಿಸಿಲ್ಲ. ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರ ತಂದೆ ನಿಧನದ ಕಾರಣದಿಂದ  ರೀತಿ ಹೇಳಿರಬಹುದು ಎನ್ನಲಾಗುತ್ತಿದೆ.  (ಎಸ್.ಎಚ್)

Leave a Reply

comments

Related Articles

error: