ಪ್ರಮುಖ ಸುದ್ದಿ

ಬೋಟ್ ಮುಳುಗಡೆ: ೧೨ ಮಂದಿ ರೊಹಿಂಗ್ಯಾ ನಿರಾಶ್ರಿತರ ಸಾವು, ಹಲವರು ನಾಪತ್ತೆ

ಪ್ರಮುಖ ಸುದ್ದಿ, ಬರ್ಮಾ, ಅ.೯: ಬೋಟ್ ಮುಳುಗಡೆಯಾಗಿ ೧೨ ಮಂದಿ ಸಾವಿಗೀಡಾಗಿದ್ದು ಹಲವರು ನಾಪತ್ತೆಯಾಗಿರುವ ಘಟನೆ ಬಾಂಗ್ಲಾದೇಶದ ನಾಫ್ ನದಿಯಲ್ಲಿ ಸಂಭವಿಸಿದೆ.
ರೊಹಿಂಗ್ಯಾ ನಿರಾಶ್ರಿತರನ್ನು ಹೊತ್ತು ಸಾಗುತ್ತಿದ್ದ ನಾಫ್ ನದಿಯಲ್ಲಿ ಇದ್ದಕ್ಕಿದ್ದಂತೆ ಮುಳುಗಡೆಯಾಗಿದೆ. ಇದರಿಂದ ೧೨ ಮಂದಿ ಸಾವನ್ನಪ್ಪಿದ್ದಾರೆ. ಮಯನ್ಮಾರ್‌ನ ರಾಖೀನ್ ನಗರದಲ್ಲಿ ಸೇನಾ ಕಾರ್ಯಾಚರಣೆ ನಡೆಯುತ್ತಿದ್ದು, ಲಕ್ಷಾಂತರ ರೊಹಿಂಗ್ಯಾ ಮುಸ್ಲಿಮರು ಮಯನ್ಮಾರ್ ತೊರೆಯುತಿದ್ದಾರೆ. ಇದೇ ಮಾದರಿಯಲ್ಲೇ ಸುಮಾರು ೧೦೦ ಮಂದಿ ರೊಹಿಂಗ್ಯಾ ನಿರಾಶ್ರಿತರು ಮಯನ್ಮಾರ್ ತೊರೆದು ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸುತ್ತಿದ್ದರು. ಈ ವೇಳೆ ಬೋಟ್ ದುರಂತಕ್ಕೀಡಾಗಿದೆ.
ಘಟನೆ ಬಳಿಕ ಬಾಂಗ್ಲಾದೇಶದ ಅಗ್ನಿಶಾಮಕ ದಳ ಹಾಗೂ ವಿಪತ್ತು ನಿಗ್ರಹ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಕಾರ್ಯಾಚರಣೆ ನಡೆಸಿದ್ದಾರೆ. ಬೋಟ್ ಪ್ರಯಾಣಿಕರೆಲ್ಲರೂ ನೀರಿನಲ್ಲಿ ಮುಳುಗಿದ್ದು, ಈವರೆಗೂ ಸುಮಾರು ೧೨ ಶವಗಳನ್ನು ಹೊರತೆಗೆಯಲಾಗಿದೆ. ಹಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. (ವರದಿ ಬಿ.ಎಂ)

Leave a Reply

comments

Related Articles

error: