ಪ್ರಮುಖ ಸುದ್ದಿಮೈಸೂರು

ಮೈಸೂರು ರೈಲ್ವೆ ನಿಲ್ದಾಣದ ‘ಎಸ್ಕಲೇಟರ್’ ಉದ್ಘಾಟನೆ

ಮೈಸೂರಿನ ರೈಲ್ವೆ ಪ್ರಯಾಣಿಕರಿಗೊಂದು ಸಿಹಿ ಸುದ್ದಿ. ಇನ್ನು ಮುಂದೆ ರೈಲ್ವೆ ನಿಲ್ದಾಣದಲ್ಲಿ ಇಳಿದ ವೃದ್ಧರು, ಮಹಿಳೆ ಮತ್ತು ಮಕ್ಕಳು ಒಂದು ಪ್ಲಾಟ್ ಫಾರಂನಿಂದ ಇನ್ನೊಂದು ಪ್ಲಾಟ್ ಫಾರಂಗೆ ತಲುಪಲು ಹೇಗಪ್ಪ ಈ ಮೆಟ್ಟಿಲೇರಿ ಇಳಿಯುವುದು ಎನ್ನುವ ಚಿಂತೆ ಬಿಟ್ಟುಬಿಡಿ. ನಿಮ್ಮ ಸುಖಕರ ಪಯಣಕ್ಕಾಗಿ ರೈಲ್ವೆ ಇಲಾಖೆಯು ಎಸ್ಕಲೇಟರ್ ಆರಂಭಿಸಿದೆ.

ಮೈಸೂರು ರೈಲ್ವೆ ನಿಲ್ದಾಣದ ಒಂದು ಮತ್ತು ಆರನೇ ಪ್ಲಾಟ್ ಫಾರಂನಲ್ಲಿ 2.32 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ‘ಎಸ್ಕಲೇಟರ್’ ಅನ್ನು  ಗೋವಾದ ರೈಲ್ವೆ ನಿಲ್ದಾಣದಿಂದ ರೈಲ್ವೆ ಸಚಿವ ಸುರೇಶ್ ಪ್ರಭು ವೀಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆಗೊಳಿಸಿ ಮಾತನಾಡಿ, ಹಿರಿಯ ನಾಗರಿಕರು ಮತ್ತು ಮಹಿಳೆಯರು ಒಂದು ಪ್ಲಾಟ್ ಫಾರಂನಿಂದ ಮತ್ತೊಂದು ಪ್ಲಾಟ್ ಫಾರಂಗಳನ್ನು ಸುಲಭವಾಗಿ ತಲುಪಲು ಎಸ್ಕಲೇಟರ್ ನೆರವಾಗಲಿದೆ. ಮೈಸೂರು ರೈಲು ನಿಲ್ದಾಣದ ಮೊದಲ ಮತ್ತು ಕೊನೆಯ ಪ್ಲಾಟ್ ಫಾರಂನಲ್ಲಿ ವಿದ್ಯುಕ್ತವಾಗಿ ಚಾಲನೆಗೊಂಡಿರುವ ಎಸ್ಕಲೇಟರ್ 2.32 ಕೋಟಿ ವೆಚ್ಚದಲ್ಲಿ 6.3 ಮೀಟರ್ ವರ್ಟಿಕಲ್ ಎತ್ತರವಿದ್ದು ಪ್ರತಿ ಸೆಕೆಂಡಿಗೆ 0.5 ಮೀಟರ್ ವೇಗದಲ್ಲಿ ಚಲಿಸಲಿದ್ದು ಅತ್ಯಾಧುನಿಕ ತಂತ್ರಜ್ಞಾನದ ಸೆನ್ಸರ್ ಹೊಂದಿದ್ದು ಪ್ರಯಾಣಿಕರು ಇದ್ದಾಗ ಮಾತ್ರ ಚಲಿಸುವುದು.

ಈ ಸಂದರ್ಭದಲ್ಲಿ ಸದರನ್ ರೈಲ್ವೆ ವಿಭಾಗದ ಎಡಿಆರ್ ಎಂ ಪಿ.ರಾಮ್, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕೆ.ಅನಿಲ್ ಕುಮಾರ್ ಅಧಿಕಾರಿಗಳಾದ ರಂಗನಾಥ್ ಚಂದ್ರಶೇಖರ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: