ಮೈಸೂರು

ದೇವರೆಂದು ಯಾಮಾರಿಸಿ ಹಣ ವಸೂಲಿ; ನಾವೇ ದೇವರೆಂದು ಗ್ರಾಮದೇವತೆ ಹಬ್ಬಕ್ಕೆ ಅಡ್ಡಿಪಡಿಸಿದ ಯುವಕರು

ಮೈಸೂರು,(ನಂಜನಗೂಡು),ಅ.9-ತಲತಲಾಂತರದಿಂದ ಆಚರಿಸಿಕೊಂಡು ಬಂದಿರುವ ಗ್ರಾಮದೇವತೆಯ ಹಬ್ಬಕ್ಕೆ ಹೊಸ ದೇವರುಗಳು ಸೆಡ್ಡು ಹೊಡೆದಿವೆ. ಮೂವರು ಯುವಕರ ಹೊಸ ಅವತಾರಕ್ಕೆ ನಂಜನಗೂಡು ತಾಲೂಕಿನ ತಾಯೂರು ಗ್ರಾಮದ ಜನ ಕಂಗಾಲಾಗಿದ್ದಾರೆ.

ಕಳೆದ ನಾಲ್ಕು ತಿಂಗಳಿಂದ ತಾಯೂರು ಗ್ರಾಮದಲ್ಲಿ ಬಿಳಿಗಿರಿ ರಂಗಪ್ಪ, ಆಂಜನೇಯಸ್ವಾಮಿ ಹಾಗೂ ದೊಣ್ಣೆ ಬೀರಪ್ಪ ದೇವರು ಅವತಾರವೆತ್ತಿದ್ದು, ಗ್ರಾಮಸ್ಥರ ನಿದ್ದೆ ಕೆಡಿಸಿದೆ. ಗ್ರಾಮದ ಕುಮಾರ್, ನಾರಾಯಣಸ್ವಾಮಿ, ಶಿವು ಎಂಬ ಯುವಕರ ಮೇಲೆ ಬರುವ ಈ ದೇವರುಗಳು, ಅನಾದಿ ಕಾಲದಿಂದ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮದೇವತೆ ಮನೆಯಮ್ಮನ ಹಬ್ಬಕ್ಕೆ ಸೆಡ್ಡು ಹೊಡೆದಿದೆ. ಕುಮಾರ್ ಮೈ ಮೇಲೆ ಬಳಿಗಿರಿ ರಂಗಪ್ಪ, ನಾರಾಯಣಸ್ವಾಮಿ ಮೈ ಮೇಲೆ ಆಂಜನೇಯಸ್ವಾಮಿ, ಶಿವು ಮೈ ಮೇಲೆ ದೊಣ್ಣೆ ವೀರಪ್ಪ ದೇವರು ಆವಾಹನೆಯಾಗುತಂತೆ. ತಾವೇ ದೇವರು ತಮ್ಮ ಮುಂದೆ ಇನ್ಯಾವ ದೇವರೂ ಇಲ್ಲವೆಂದು ಸ್ವಯಂ ಘೋಷಿಸಿಕೊಂಡಿದ್ದಾರೆ.

ನವರಾತ್ರಿ ಸಮಯದಲ್ಲಿ ಇಡೀ ಗ್ರಾಮ ಸೇರಿ ಮನೆಯಮ್ಮನ ಹಬ್ಬ ಆಚರಣೆ ಮಾಡುತ್ತಾರೆ. ಮನೆಯಮ್ಮನ ಹಬ್ಬ ಆಚರಿಸುವ ವೇಳೆ ಗಲಾಟೆ ನಡೆದಿದ್ದು, ಕಳಶದಲ್ಲಿ ಗಂಗಾಜಲವನ್ನು ತರುತ್ತಿದ್ದ ಭಕ್ತ ಮೇಲೆ ಏಕಾಏಕಿ ದಾಳಿ ಮಾಡಿದ ಈ ಮೂವರು ಯುವಕರು ಭಕ್ತಾದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಹೊಸ ದೇವರುಗಳ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ತಾಯೂರು. ಗ್ರಾಮಸ್ಥರನ್ನ ದೇವರ ಹೆಸರೇಳಿಕೊಂಡು ಬೆದರಿಸುತ್ತಿರುವ ಯುವಕರು ಕಳೆದ ನಾಲ್ಕು ತಿಂಗಳುಗಳಿಂದ ನಿರುದ್ಯೋಗಿಗಳಾಗಿದ್ದರು. ಹಣ ಸಂಪಾದನೆ ಮತ್ತು ಪುಕ್ಕಟೆ ಪ್ರಚಾರಕ್ಕಾಗಿ ಇಂತಹ ಅಡ್ಡದಾರಿಗೆ ಇಳಿದಿರುವ ಆರೋಪಗಳು ಕೇಳಿ ಬರುತ್ತಿವೆ. (ವರದಿ-ಎಸ್.ಎನ್, ಎಂ.ಎನ್)

 

Leave a Reply

comments

Related Articles

error: