ಮನರಂಜನೆ

ಬಹುನಿರೀಕ್ಷಿತ ಚಿತ್ರ ಪದ್ಮಾವತಿ ಯ ಟ್ರೈಲರ್ ಬಿಡುಗಡೆ

ದೇಶ(ಮುಂಬೈ)ಅ.9:- ಸಂಜಯ್ ಲೀಲಾ ಬನ್ಸಾಲಿಯವರ ಬಹುನಿರೀಕ್ಷಿತ ಚಿತ್ರ ಪದ್ಮಾವತಿ ಯ ಟ್ರೈಲರ್ ಬಿಡುಗಡೆಗೊಳಿಸಲಾಗಿದೆ.

ಮೂರು ನಿಮಿಷದ  ಈ ಟ್ರೈಲರ್ ನ ನೋಡಿದ ಪ್ರತಿಯೊಬ್ಬರೂ ಬನ್ಸಾಲಿಯವರ ಕಲಾ ನೈಪುಣ್ಯತೆಯನ್ನು ವರ್ಣಿಸಲು ಆರಂಭಿಸುತ್ತಾರೆ. ಅವರ ಪ್ರತಿ ಚಿತ್ರದಲ್ಲಿನ ರೀತಿಯಂತೆ ಈ ಚಿತ್ರವೂ ಭವ್ಯತೆಯಿಂದ ಕೂಡಿದೆ. ನಟಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿಯ ಪಾತ್ರಕ್ಕೆ ಜೀವತುಂಬಿದ್ದು, ನಟ  ಶಾಹಿದ್ ಕಪೂರ್ ಮಹಾರಾಜ ರವಲ ರತ್ನ ಸಿಂಗ್ ನ ಪಾತ್ರ ನಿಭಾಯಿಸಿದ್ದಾರೆ. ನಟ ರಣವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿಯ ಪಾತ್ರ ಮಾಡಿದ್ದಾರೆ. ಮೂರು ನಿಮಿಷದ ಈ ಟ್ರೈಲರ್ ನಲ್ಲಿ ನೆಗೆಟಿವ್ ರೋಲ್ ನಿಭಾಯಿಸುವ ರಣವೀರ್ ಸಿಂಗ್ ಉದ್ದೇಶ ಕಂಡು ಬರುತ್ತಿದ್ದು, ಮಾಂಸ ತಿನ್ನುತ್ತಲೇ ಹೋರಾಟ ನಡೆಸುವ ರೀತಿ ಕಂಡು ಬರುತ್ತಾರೆ. ಕೊನೆಯ ಚಿತ್ರ ಬೆಫಿಕ್ರ್ ನಲ್ಲಿ ಕಾಣಿಸಿಕೊಂಡ ರಣವೀರ್ ಸಿಂಗ್ ಗೂ ಇದಕ್ಕೂ ತುಂಬಾನೇ ವ್ಯತ್ಯಾಸವಿದೆ. ಟ್ರೈಲರ್ ನಲ್ಲಿ ಶಾಹಿದ್ದ ಕಪೂರ್ ಮತ್ತು ದೀಪಿಕಾಪಡುಕೋಣೆಯ ನೆರಳಾಗಿ ಹಿಂಬಾಲಿಸುತ್ತಿದ್ದು, ಒಂದೇ ಒಂದು ಡೈಲಾಗ್ ಕೂಡ ಇಲ್ಲ. ಯಾರ ತಲೆ ಕತ್ತರಿಸಿದ್ದರೂ ಕೂಡ ವೈರಿಗಳ ಜೊತೆ ಹೋರಾಟ ನಡೆಸುತ್ತಾರೋ ಅವರು ರಜಪೂತರು ಎಂದು ಶಾಹಿದ್ ಕಪೂರ್ ಹೇಳುತ್ತಿದ್ದರೆ, ದೀಪಿಕಾ ರಜಪೂತರ ಕಂಕಣಗಳಿಗೆ ರಜಪೂತರ ತಲವಾರ್ ಗಳಿಗಿರುವಷ್ಟೇ ಶಕ್ತಿ ಇದೆ ಎನ್ನುವ ಮಾತಿದ್ದು ಗಮನ ಸೆಳೆಯುತ್ತಿದೆ. ಚಿತ್ರ ಡಿಸೆಂಬರ್ ಒಂದರಂದು ತೆರೆ ಕಾಣಲಿದ್ದು ಬಾಕ್ಸ್ ಆಫೀಸನ್ನು ಯಾವ ರೀತಿ ಕೊಳ್ಳೆ ಹೊಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ. (ಎಸ್.ಎಚ್)

Leave a Reply

comments

Related Articles

error: