ಕರ್ನಾಟಕ

ಆಹಾರ ತಿನ್ನುವ ಹಕ್ಕಿನ ಬಗ್ಗೆ ಟೀಕೆ ಮಾಡಲು ನಾವ್ಯಾರು: ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಅ.9-ಆಹಾರ ಸೇವಿಸೋದು ಅವರವರ ಹಕ್ಕು. ರಾಜಕೀಯವಾಗಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಬೇರೆಯವರ ಆಹಾರ ತಿನ್ನುವ ಹಕ್ಕಿನ ಬಗ್ಗೆ ಟೀಕೆ ಮಾಡಲು ನಾವ್ಯಾರು. ಇದನ್ನ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶಾಸಕ ಸಿ.ಟಿ.ರವಿ ಆಸ್ಪತ್ರೆ ಮುಂದೆ ಕ್ಯೂ ನಿಂತೋರೆಲ್ಲಾ ಗೋ ಮಾಂಸ ಭಕ್ಷಕರು. ಗೋ ಮಾಂಸ ತಿನ್ನುವವರೆಲ್ಲ ರೋಗಿಗಳು ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಈ ಮೇಲಿನಂತೆ ಪ್ರತಿಕ್ರಿಯಿಸಿದರು. ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅನಂತಕುಮಾರ್ ವಿರುದ್ಧ ದೂರು ದಾಖಲು ವಿಚಾರವಾಗಿ ಮಾತನಾಡಿ, ಪೊಲೀಸರು ಆ ಬಗ್ಗೆ ಕ್ರಮಕೈಗೊಳ್ಳುತ್ತಾರೆ. ನಾನೇನೂ ಪೊಲೀಸ್ ಅಥವಾ ಎಸಿಬಿಯವರಾ ದೂರು ದಾಖಲಿಸಿಕೊಳ್ಳೋಕೆ ಎಂದಿದ್ದಾರೆ.

ವಿಟಿಯು ಮಹೇಶ್ವರಪ್ಪಗೆ ಕೆಪಿಸಿಸಿ ಐಟಿ ಸೇಲ್ ಪ್ರಧಾನ ಕಾರ್ಯದರ್ಶಿ ಮಾಡಿರುವುದನ್ನು ಸಮರ್ಥಿಸಿಕೊಂಡ ಸಿಎಂ ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ಅವರೇ ಬಿಜೆಪಿ ರಾಜ್ಯಾಧ್ಯಕ್ಷ ರಾಗಿದ್ದಾರೆ. ಇದು ಅದಕಿಂತಲೂ ದೊಡ್ಡ ಆಫೆನ್ಸ ಎಂದು ಮಾಧ್ಯಮದವರನ್ನ ಪ್ರಶ್ನೆ ಮಾಡಿದರು. ಇದೇ ಸಂದರ್ಭದಲ್ಲಿ ಮುಂದಿನ ಹತ್ತು ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚದಿದ್ದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. (ವರದಿ-ಎಸ್.ಎನ್, ಎಂ.ಎನ್)

 

 

 

 

 

Leave a Reply

comments

Related Articles

error: