ಕರ್ನಾಟಕ

ರೈತರಿಗೂ ನೀರಿಗೂ ಅಗಾಧವಾದ ಸಂಬಂಧವಿದೆ : ಶಾಸಕ ಕೆ.ಎಸ್.ಪುಟ್ಟಣ್ಣಯ್ಯ

ರಾಜ್ಯ(ಮಂಡ್ಯ)ಅ.9:- ಪಾಂಡವಪುರ ತಾಲೂಕಿನ ಬೇಬಿಗ್ರಾಮದ `ಬೇಬಿ ಕೆರೆ’ ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಕೆರೆಗೆ ಬಾಗೀನ ಅರ್ಪಿಸಿದರು.

ನಂತರ ಮಾತನಾಡಿದ ಅವರು, ಕೆರೆಗೆ ಬಾಗೀನ ಅರ್ಪಿಸುವುದು ಒಂದು ಹೃದಯ ಸ್ಪರ್ಶಿ ಕಾರ್ಯಕ್ರಮವಾಗಿದೆ ರೈತರಿಗೂ ನೀರಿಗೂ ಅಗಾಧವಾದ ಸಂಬಂಧವಿದೆ. ದೇಶದ ಯಾವೊಬ್ಬ ನಾಗರಿಕನು ಕೆರೆ ಭರ್ತಿಯಾದಂತಹ ಸಂದರ್ಭದಲ್ಲಿ ಕೆರೆಕಟ್ಟೆಗಳಿಗೆ ಬಾಗೀನ ಅರ್ಪಿಸುವುದಿಲ್ಲ. ಆದರೆ ರೈತರು ಕೆರೆಗೆ ಪೂಜೆಸಲ್ಲಿಸಿ ನೀರಿಗೆ ಬಾಗೀನ ಅರ್ಪಿಸುವ ಸಾಂಸ್ಕೃತಿಕ ಚಿಂತನೆಯನ್ನು ಮೊದಲಿನಿಂದಲು ಬೆಳೆಸಿಕೊಂಡು ಬಂದಿದ್ದಾರೆ. ರೈತರು ನೀರು ಕೇಳೋದು ದೇಶದ ಜನರಿಗೆ ಆಹಾರ ಪೂರೈಕೆ ಮಾಡುವುದಕ್ಕಾಗಿ ಹಾಗಾಗಿ ರೈತರ ರಕ್ಷಣೆ ಮಾಡಬೇಕು. ರೈತರಿಗೆ ಅಗತ್ಯವಿರುವ ನೀರಿನ ಸೌಲಭ್ಯಗಳನ್ನು ಪೂರೈಕೆ ಮಾಡಬೇಕು ಎಂದು ತಿಳಿಸಿದರು.

ಬೇಬಿಕೆರೆಯೂ ಸುಮಾರು 75 ಎಕರೆ ಒಳ ವಿಸ್ತೀರ್ಣವನ್ನು ಹೊಂದಿದ್ದು ಅಂದಾಜು 270 ಎಕರೆ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಕೆರೆಯೂ ಭರ್ತಿಯಾಗಿರುವುದರಿಂದ ಪಂಪ್‍ಸೆಟ್‍ಗಳಿಗೆ ಅಂತರ್ಜಲ, ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತದೆ. ಕೆರೆಯನ್ನು ಮತ್ತೆ ಎರಡು ಮೀಟರ್ ಹೆಚ್ಚಿಸಿ ಹೆಚ್ಚು ನೀರು ಸಂಗ್ರಹಣೆ ಮಾಡಿಸಿ ಎರಡು ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಲಾಗುವುದು. ಜೊತೆಗೆ ಕೆರೆಯ ಅಭಿವೃದ್ದಿ ದೃಷ್ಠಿಯಿಂದ ಸಮಿತಿ ರಚಿಸಿ ಆ ಸಮಿತಿಯ ಸದಸ್ಯರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುವುದು, ಕೆರೆಯ ಹೂಳೆತ್ತುವ, ಕೆರೆ ನಿರ್ವಹಣೆ ಮಾಡುವ ಎಲ್ಲಾ ಜವಬ್ದಾರಿಯನ್ನು ಸಮಿತಿಗೆ ನೀಡಲಾಗುವುದು ಎಂದರು.

ತಾಲೂಕಿನ ಬೇಬಿಬೆಟ್ಟದ ಗಣಿಗಾರಿಕೆಯಿಂದ ಅಕ್ಕ-ಪಕ್ಕದ ಕೆರೆಕಟ್ಟೆಗಳು ಸಂಪೂರ್ಣವಾಗಿ ನಾಶವಾಗುತ್ತಿದೆ. ಬೇಬಿಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರಿಂದ ಮಳೆಗಾಲದ ಸಂದರ್ಭದಲ್ಲಿ ಬೆಟ್ಟದ ಜಲದ ನೀರು ಕೆರೆಕಟ್ಟೆಗಳಿಗೆ ಬರದ ಕಾರಣ ಕೆರೆಕಟ್ಟೆಗಳು ಸಂಪೂರ್ಣವಾಗಿ ನಾಶವಾಗುತ್ತಿವೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಈ ಸಂದರ್ಭ ಜಿಪಂ ಮಾಜಿ ಸದಸ್ಯರಾದ ಎ.ಎಲ್.ಕೆಂಪೂಗೌಡ, ಗೋವಿಂದೇಗೌಡ, ಮುಖಂಡರಾದ ಷಡಕ್ಷರಿ, ಸಿದ್ದಲಿಂಗದೇವರು, ಸಿದ್ದರಾಜು, ಮಂಜುನಾಥ್, ಲಿಂಗಪ್ಪ, ಪ್ರಕಾಶ್, ಪರಶಿವಮೂರ್ತಿ, ನಾರಾಯಣ ಸೇರಿದಂತೆ ಹಲವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: