ಕರ್ನಾಟಕ

ವಿಷನ್ 2025: ಅಧಿಕಾರೇತರ ತಜ್ಞರನ್ನು ತಂಡಗಳಿಗೆ ಆಯ್ಕೆ ಮಾಡಲು ಮಂಡ್ಯ ಜಿಲ್ಲಾಧಿಕಾರಿ ಸೂಚನೆ

ಮಂಡ್ಯ (ಅ.9) : ವಿಷನ್ 2025 ಡಾಕ್ಯುಮೆಂಟ್ ಯೋಜನೆ ಸಿದ್ಧ ಪಡಿಸಲು ರಚಿಸಲಾಗಿರುವ ತಂಡಗಳ ಮುಖ್ಯಸ್ಥರು ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಾಜದ ಎಲ್ಲಾ ಕ್ಷೇತ್ರದ ಜನರನ್ನು ಒಳಪಡುವಂತಹ ಅಧಿಕಾರೇತರ ತಜ್ಞರನ್ನು ಶೀಘ್ರವಾಗಿ ತಂಡಗಳಿಗೆ ಆಯ್ಕೆ ಮಾಡಲು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದರು.

ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ವಿಷನ್ 2025 ಡಾಕ್ಯುಮೆಂಟ್‍ಯೋಜನೆ ಸಂಬಂಧ ಶನಿವಾರ ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಧಿಕಾರಿಯವರು ವಿವಿಧ ಕ್ಷೇತ್ರಗಳ ಪಾಲುದಾರರಿಗೆ ಅಭಿವೃದ್ಧಿಯಲ್ಲಿ ನಮಗೇನು ಲಭ್ಯವಾಗುತ್ತಿದೆ ಎನ್ನುವುದರ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಅವರ ಅಗತ್ಯತೆಗೆ ಅನುಗುಣವಾಗಿ ಏಳು ವರ್ಷಗಳ ಅಭಿವೃದ್ಧಿ ಮುನ್ನೋಟ ಸಿದ್ಧಪಡಿಸಲು ಕರ್ನಾಟಕ ಸರಕಾರ ಮುಂದಾಗಿದೆಎಂದು ಹೇಳಿದರು.

ಮಂಡ್ಯಜಿಲ್ಲೆಯಲ್ಲಿ ಅಕ್ಟೋಬರ್ 19 ರಂದು ನಡೆಯುವ ಕಾರ್ಯಾಗಾರದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದು, ಇದಕ್ಕೂ ಮುನ್ನತಂಡಗಳ ಮುಖ್ಯಸ್ಥರು ತಮ್ಮ ತಂಡದ ಸದಸ್ಯರೊಂದಿಗೆ ಸಭೆನಡೆಸಿ ಅಭಿಪ್ರಾಯ ಹಾಗೂ ಸಲಹೆಗಳನ್ನು ಸಂಗ್ರಹಿಸಿದರೆ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸಾಧ್ಯಎಂದು ಹೇಳಿದರು.

ಸಮಾಜದ ವಿವಿಧ ವಲಯದಗಣ್ಯರು, ತಜ್ಞರು, ಪರಿಣಿತರು, ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು, ಜನಸಾಮಾನ್ಯರುಒಳಗೊಂಡಂತೆ ಪ್ರತಿಯೊಬ್ಬ ಸಾರ್ವಜನಿಕ ಪಾಲುದಾರನಅಭಿಪ್ರಾಯ ಕ್ರೋಢೀಕರಿಸಿ ಮುಂದಿನ ಏಳು ವರ್ಷಗಳ ಅಭಿವೃದ್ಧಿಯ ಮುನ್ನೋಟಕ್ಕೆ ಈ ವಿಷನ್ 2025 ಯೋಜನೆತಯಾರಿಸಲಾಗುತ್ತಿದೆ.ಈ ಮುನ್ನೋಟ ತಯಾರಿಕೆ ಜಿಲ್ಲಾಮಟ್ಟದಿಂದ ರಾಜ್ಯಮಟ್ಟದ ಹಂತದಲ್ಲಿ ರೂಪುಗೊಳ್ಳಲಿದ್ದು, ಪ್ರಾದೇಶಿಕ, ಸಾಂಸ್ಕøತಿಕ, ಭೌಗೋಳಿಕ ಹಾಗೂ ಸ್ಥಳೀಯ ಅಭಿವೃದ್ಧಿಗೆ ಧ್ವನಿಯಾಗಲಿದೆ ಎಂದು ತಿಳಿಸಿದರು.

ವಿಷನ್ 2025 ಜಿಲ್ಲೆಯ ಪ್ರತಿಯೊಬ್ಬ ನಾಗರೀಕರ ಆಶಯ, ಭರವಸೆಗಳನ್ನು ಮತ್ತು ನಿರೀಕ್ಷೆಗಳನ್ನು ಪ್ರತಿಬಿಂಬಿಸಲು ಉತ್ತಮ ವೇದಿಕೆಯಾಗಲಿದೆ. ಸಾರ್ವಜನಿಕರ ಸಲಹೆ ಮತ್ತುಅಭಿಪ್ರಾಯ ಪಡೆಯುವ ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ನಾಗರೀಕರು ಭಾಗವಹಿಸಿ ಅಭಿವೃದ್ಧಿ ಕುರಿತಾದ ತಮ್ಮ ಸಲಹೆಗಳನ್ನು ಲಿಖಿತವಾಗಿಯೂ ಜಿಲ್ಲಾಧಿಕಾರಿ ಕಚೇರಿಗೆ ನೀಡಬಹುದಾಗಿದೆ ಎಂದರು.

ಕೃಷಿ, ಮೂಲಸೌಕರ್ಯಗಳು, ಉದ್ಯೋಗ ಮತ್ತು ಕೌಶಲ್ಯ,ಕೈಗಾರಿಕೆ, ಗ್ರಾಮೀಣಾಭಿವೃದ್ಧಿ, ಸಾಮಾಜಿಕ ನ್ಯಾಯ, ನಗರಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಕಾನೂನು ಮತ್ತು ಸುವ್ಯವಸ್ಥೆ, ಮಾಹಿತಿತಂತ್ರಜ್ಞಾನ, ಸೇವೆಗಳು, ಆಡಳಿತ ಸೇರಿದಂತೆ 5 ಪ್ರಮುಖ ಕ್ಷೇತ್ರಗಳನ್ನು ಆಧರಿಸಿ 13 ವಿಷಯಗಳ ಅಭಿವೃದ್ಧಿಗೆ ಮುನ್ನೋಟ ರಚನೆಯಾಗಲಿದೆ ಎಂದು ಹೇಳಿದರು.

ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಪ್ರಸಕ್ತ ಕಾಲಕ್ಕೆ ತಕ್ಕಂತೆಆಗಬೇಕಾದ ಬದಲಾವಣೆ ಮತ್ತಿತರ ಕಾರ್ಯಗಳ ಕುರಿತು ಅಕ್ಟೋಬರ್ 19 ರಂದು ಮಂಡ್ಯಜಿಲ್ಲೆಯಲ್ಲಿ ನಡೆಯುವ ಕಾರ್ಯಾಗಾರದಲ್ಲಿ ಚರ್ಚೆ, ಸಂವಾದ, ಅಭಿಪ್ರಾಯ ಮಂಡನೆ ನಡೆಯಲಿದೆಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಣಾಧಿಕಾರಿ ಶರತ್, ಅಪರಜಿಲ್ಲಾಧಿಕಾರಿ ವಿಜಯ್, ಹೆಚ್ಚುವರಿ ಜಿಲ್ಲಾಧಿಕಾರಿ ಲಾವಣ್ಯ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣರಾಜು,ಮಂಡ್ಯ ಉಪ ವಿಭಾಗಾಧಿಕಾರಿ ರಾಜೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.

(ಎನ್‍ಬಿಎನ್‍)

Leave a Reply

comments

Related Articles

error: