
ಮೈಸೂರು (ಅ.9): ಮೈಸೂರು ನಗರ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ಅ.6ರಂದು ವಿಜಯನಗರ ಠಾಣಾ ಸರಹದ್ದಿನ ವಿಜಯನಗರ 2ನೇ ಹಂತ, 5ನೇ ಕ್ರಾಸ್, 19ನೇ ಮೇನ್ ನಲ್ಲಿರುವ ಮನೆ.ನಂ.165/ಎ ಮೇಲೆ ದಾಳಿ ಮಾಡಿ ವೇಶ್ಯವಾಟಿಕೆ ನಡೆಸುತ್ತಿದ್ದ ಲಕ್ಷ್ಮಮ್ಮ ಕೋಂ ದೇಸಿಗೌಡ, 43 ವರ್ಷ, ವಿಜಯನಗರ, ಮೈಸೂರು ನಗರ; ಸುನೀಲ್ ಬಿನ್ ರಾಜು, 38 ವರ್ಷ, ಜೆ.ಜೆ.ನಗರ, ಮೇಟಗಳ್ಳಿ – ಇವರುಗಳನ್ನು ದಸ್ತಗಿರಿ ಮಾಡಿ, ವೇಶ್ಯಾವಾಟಿಕೆಗೆ ಬಳಕೆಯಾಗಿದ್ದ ನಗದು ಹಣ 3,220 ರೂ. ಹಾಗೂ 3 ಮೊಬೈಲ್ ಫೋನ್ಗಳು ಮತ್ತು ಒಂದು ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಇದೇ ಸಂದರ್ಭ ಒಬ್ಬರು ಮಹಿಳೆಯನ್ನೂ ರಕ್ಷಣೆ ಮಾಡಿಡಲಾಗಿದೆ.
ಆರೋಪಿಗಳು ಹುಡುಗಿಯರನ್ನು ವಿವಿಧೆಡೆಯಿಂದ ಕರೆತಂದು ವೇಶ್ಯವಾಟಿಕೆ ನಡೆಸಲು ಬಳಸಿಕೊಳ್ಳುತ್ತಿದ್ದ ಬಗ್ಗೆ ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಬಿ ಎಸಿಪಿ ಸಿ.ಗೋಪಾಲ್ರವರ ನೇತೃತ್ವದಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ವೈ.ಪಿ.ಚಂದ್ರಕಲಾ ಮತ್ತು ಸಿಸಿಬಿ ಸಿಬ್ಬಂದಿಯಾದ ರವಿ, ಜೀವನ್, ಮಂಜುನಾಥ್, ನಾಗುಬಾಯಿ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.
(ಎನ್ಬಿಎನ್)