ಕ್ರೀಡೆಮೈಸೂರು

ಕ್ರಿಕೆಟ್ ಸಾಧಕರಿಗೆ ಸನ್ಮಾನ

ವಿವಿಧ ಕ್ರಿಕೆಟ್ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೈಸೂರು ವಲಯದ ಕ್ರಿಕೆಟಿಗರನ್ನು ಮೈಸೂರಿನಲ್ಲಿ ಶನಿವಾರ ಸನ್ಮಾನಿಸಲಾಯಿತು.

ಮೈಸೂರಿನ ಬಲ್ಲಾಳ್ ವೃತ್ತದ ಬಳಿ ಇರುವ ನಿತ್ಯೋತ್ಸವ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ  ರಾಜ್ಯ ತಂಡವನ್ನು ಪ್ರತಿನಿಧಿಸಿದ, ಲೀಗ್ ಹಂತದಲ್ಲಿ ಮಿಂಚಿದ ಮೈಸೂರು ವಲಯ ಕ್ರಿಕೆಟಿಗರನ್ನು ಕೆಎಸ್‍ಸಿಎ ಅಧ್ಯಕ್ಷ ಪಿ.ಆರ್. ಅಶೋಕಾನಂದ ಪ್ರಶಸ್ತಿ ಪ್ರದಾನಿಸಿ ಬಹುಮಾನ ವಿತರಿಸಿ ಸನ್ಮಾನಿಸಿದರು.

ಬಳಿಕ ಮಾತನಾಡಿದ ಪಿ.ಆರ್. ಅಶೋಕಾನಂದ ಅವರು ಸ್ವಂತ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಜಾಗಕ್ಕಾಗಿ ಹುಡುಕಾಟ ನಡೆಯುತ್ತಿದೆ, ಜಾಗ ದೊರೆತರೆ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಕ್ರಿಕೆಟಿಗರಾದ ಎಂ. ಶ್ರೇಯಸ್, ನಿಕಿನ್ ಜೋಸ್, ಎಂ.ಬಿ. ದರ್ಶನ್, ವಿಷ್ಣುಪ್ರಿಯನ್, ಸಂಪ್ರದಾ ಆರ್. ಶೆಟ್ಟಿ, ಆರ್. ಹೇಮಂತ್, ಕೃತಿಕ್ ಕೃಷ್ಣ, ಶಶಾಂಕ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಮೈಸೂರು ವಲಯ ಅಧ್ಯಕ್ಷ ಸುಧಾಕರ್ ರೈ, ವಲಯ ಸಂಯೋಜಕ ಎ.ವಿ. ಶಶಿಧರ್, ವಲಯ ನಿಯಂತ್ರಕ ಎಸ್. ಬಾಲಚಂದರ್, ವಲಯ ಉಸ್ತುವಾರಿ ಬಿ.ಕೆ. ಕುಮಾರ್ ಉಪಸ್ಥಿತರಿದ್ದರು.

Leave a Reply

comments

Related Articles

error: