ಕರ್ನಾಟಕದೇಶ

ಮತ್ತೆ ಏರಿಕೆಯಾದ ಪೆಟ್ರೋಲ್ – ಡೀಸೆಲ್ ದರ..?!

ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿ ಪರಿಷ್ಕೃತ ದರವನ್ನು ಭಾನುವಾರ ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ ಆದೇಶ ಹೊರಡಿಸಿದೆ.  ಪದೇ ಪದೇ ಪೆಟ್ರೋಲ್ – ಡೀಸೆಲ್ ದರ ಏರಿಕೆಯ ಬಿಸಿ ವಾಹನ ಸವಾರರಿಗೆ ತಟ್ಟುತ್ತಲೇ ಇದೆ.  ಪೆಟ್ರೋಲ್ ಡೀಸೆಲ್ ದರ ಈಗಾಗಲೇ ಗಗನಕ್ಕೇರಿದ್ದು ಕೇಂದ್ರ ಸರ್ಕಾರ ಮತ್ತೊಮ್ಮೆ ಶಾಕ್ ನೀಡಿದೆ. ಪೆಟ್ರೋಲ್ ದರ ಪ್ರತಿ ಲೀಟರ್ ಗೆ 89 ಪೈಸೆ 72.24 ರೂಪಾಯಿ. ಡೀಸೆಲ್ ದರದಲ್ಲಿ ಪ್ರತಿ ಲೀಟರ್ ಗೆ 86 ಪೈಸೆಯನ್ನು ಏರಿಸಿದ್ದು  60.11 ರೂಪಾಯಿಯಾಗಿದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯೂ ನಿರಂತರವಾಗಿ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ.

Leave a Reply

comments

Related Articles

error: