ಮನರಂಜನೆ

ಪೋಟೋ ವೈರಲ್ ಮೌನ ಮುರಿದು ಬೇಸರ ವ್ಯಕ್ತಪಡಿಸಿದ ಅಮಿರ್ ಖಾನ್

ಮುಂಬೈ,ಅ.10:  ಸಾಮಾಜಿಕ ಜಾಲತಾಣಗಳಲ್ಲಿ ಅಮಿರ್ ಖಾನ್ ನಟಿಸುತ್ತಿರುವ ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರದ ಫೋಟೋಗಳು ಲೀಕ್ ಆಗಿರುವುದರಿಂದ ಬೇಸರಗೊಂಡ ಅಮಿರ್ ಸದ್ಯ ಮೌನ ಮುರಿದಿದ್ದಾರೆ.

 ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದ್ದು ಚಿತ್ರತಂಡಕ್ಕೆ ಸಾಕಷ್ಟು ಬೇಸರವಾಗಿದೆ. ಚಿತ್ರದ ಲುಕ್ ಅನ್ನು ಸರಿಯಾದ ಸಮಯದಲ್ಲಿ ಹಾಗೂ ಸರಿಯಾದ ರೀತಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿತ್ತು. ಆದರೆ ಈಗಲೂ ನಾವು ಸಿನಿಮಾದ ಫಸ್ಟ್ ಲುಕ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದೇವೆ.

ನನ್ನ ಹಾಗೂ ಅಮಿತಾಬ್ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದ್ದು ಸಾಕಷ್ಟು ಬೇಸರ ತಂದಿದೆ ಎಂದು ಅಮಿರ್ ತಿಳಿಸಿದ್ದಾರೆ.

ವಿಜಯ್ ಕೃಷ್ಣ ಆಚಾರ್ಯ  ನಿರ್ದೇಶನದಲ್ಲಿ ಮೂಡಿಬರುತ್ತಿರುವ ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರದಲ್ಲಿ ಹಿರಿಯ ನಟ ಅಮಿತಾಬ್ ಬಚ್ಚನ್ ನಟಿಸುತ್ತಿದ್ದು, ಕತ್ರಿನಾ ಕೈಫ್ ಹಾಗೂ ಫಾತಿಮಾ ಸನಾ ಶೇಕ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ( ವರದಿ: ಪಿ.ಜೆ )

Leave a Reply

comments

Related Articles

error: