ಸುದ್ದಿ ಸಂಕ್ಷಿಪ್ತ

ಕೈದಿಗಳ ನಡುವೆ ಮಾರಾ ಮಾರಿ

ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಟಿವಿ ನೋಡುತ್ತಿದ್ದಾಗ ಚಾನಲ್ ಬದಲಾಯಿಸುವ ಕುರಿತಂತೆ ಕೈದಿಗಳ ನಡುವೆ ಶನಿವಾರ ಮಾರಾಮಾರಿ ನಡೆದಿದ್ದು, ಇದೀಗ ಕೈದಿಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕಾರಾಗೃಹದ ಸಭಾಂಗಣದಲ್ಲಿ ಎಲ್ಲ ಕೈದಿಗಳು ಸೇರಿ ಟಿವಿ ವೀಕ್ಷಿಸುತ್ತಿದ್ದು, ಈ ವೇಳೆ ಚಾನಲ್ ಬದಲಾಯಿಸುವ ಕುರಿತು ನಾಲ್ಕೈದು ಕೈದಿಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಬಳಿಕ ಗಲಾಟೆ ತೀವ್ರಗೊಂಡಿದ್ದು ಹೊಡೆದಾಟಕ್ಕಿಳಿದಿದ್ದಾರೆ. ಸ್ಥಳಕ್ಕೆ ಕಾರಾಗೃಹದ ಸಿಬ್ಬಂದಿ ತೆರಳಿ ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ. ಆದರೆ ಕೆಲವು ಕೈದಿಗಳಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Leave a Reply

comments

Related Articles

error: